ಬೆಂಗಳೂರು: ವಿವಾಹ ಜೀವನದ ಯಶಸ್ಸಿಗೆ ದಂಪತಿಯ ಜಾತಕ ಹೊಂದಾಣಿಕೆಯೂ ಕಾರಣವಾಗುತ್ತದೆ. ಮೊನ್ನೆ ಮೇಷ ರಾಶಿಯವರ ಕಲಹಕ್ಕೆ ಪರಿಹಾರ ಹೇಳಿದ್ದೆವು. ಇಂದು ವೃಷಭ ರಾಶಿಯವರಿಗೆ ಪರಿಹಾರವೇನೆಂದು ನೋಡೋಣ.ವೃಷಭ ರಾಶಿ ವೃಷಭ ರಾಶಿಯನ್ನು ಹೊಂದಿರುವ ಗಂಡ-ಹೆಂಡತಿ ಪರಸ್ಪರ ಜಗಳವಾಡುತ್ತಿದ್ದರೆ, ಕಲಹವಿದ್ದರೆ, ಅದಕ್ಕೆ ಮುಖ್ಯ ಕಾರಣ ಕುಜನ ವಕ್ರದೃಷ್ಟಿ. ಕುಜ ದೋಷ ಎನ್ನುವುದು ವೈವಾಹಿಕ ಜೀವನದ ಸಂತೋಷ-ದುಃಖ ನಿರ್ಧರಿಸುತ್ತದೆ ಎಂದು ಈಗಾಗಲೇ ಹಲವು ಬಾರಿ ತಿಳಿದುಕೊಂಡಿದ್ದೇವೆ. ಈ ರಾಶಿಯವರ ಮೇಲೆ ಮಂಗಳನ ಪ್ರಭಾವ ಹೆಚ್ಚಿರುತ್ತದೆ.