ಉದ್ಯೋಗಸ್ಥ ಮಹಿಳೆಯರೇ ಸ್ವಲ್ಪ ಇತ್ತ ನೋಡಿ !

ಶುಕ್ರವಾರ, 17 ಜನವರಿ 2014 (11:49 IST)

PR
ಈಗ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಅವರ ಗಮನ ಹೆಚ್ಚಾಗಿ ತಾವು ಗೆಲ್ಲಬೇಕು ಎಂದುಕೊಂಡಿರುವ ಗೋಲ್ ಗಳ ಕಡಗೆ ನೆಟ್ಟಿರುತ್ತದೆ. ಮನೆ ಹಾಗೂ ವೃತ್ತಿ ಬದುಕಲ್ಲಿ ಗೆಲುವು ಸಾಧಿಸಲು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ.ಇದರ ಪರಿಣಾಮವಾಗಿ ಅವರ ನಿದ್ದೆಯ ಸಮಯದಲ್ಲಿ ಕಡಿತ ಮತ್ತು ಸೌಂದರ್ಯದ ರಕ್ಷಣೆಯ ವಿಷಯದಲ್ಲಿ ಹೆಚ್ಚಿನ ಗಮನ ನೀಡದೆ ಇರುವಂತಹ ಪರಿಸ್ಥಿತಿ. ಇಂತಹ ಹೆಣ್ಣುಮಕ್ಕಳಿಗೆಂದು ಸರಳ ಮತ್ತು ಆರಾಮದಾಯಕ ಉಪಚಾರಗಳನ್ನು ನೀಡಲಾಗಿದೆ. ಅದನ್ನು ಅನುಸರಿಸಿದರೆ, ಉತ್ತಮ ಪ್ರಯೋಜನವನ್ನು ಹೊಂದ ಬಹುದಾಗಿದೆ.

ನಿಮಗೆ ಜಿಡ್ಡುಯುಕ್ತ ಚರ್ಮ ತತ್ವ ಇದ್ದಲ್ಲಿ ತಪ್ಪದೇ ಮುಂಜಾನೆ ಸಮಯದಲ್ಲಿ ಸೋಪು ಇಲ್ಲವೇ ಫೇಸ್ ವಾಷ್ ನಿಂದ ಮುಖ ತೊಳೆಯದೆ ಬರಿ ನೀರಲ್ಲಿ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಿರಿ.ನೀವು ಸರಳ ಮೇಕಪ್ ಮಾಡಿ ಕೊಳ್ಳುವುದಕ್ಕೆ ಆದ್ಯತೆ ನೀಡಿ.

ಎಣ್ಣೆ ಚರ್ಮ ಹೊಂದಿರುವ ಮಹಿಳೆಯರು ಪ್ರಯಾಣಿಸುವ ಮುನ್ನ ತಪ್ಪದೇ ಐಸ್ ಕ್ಯೂಬ್ ಬಳಸಿ ಮಸಾಜ್ ಮಾಡಿಕೊಳ್ಳಿ.ಹೀಗೆ ಮಾಡುವುದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುವುದಿಲ್ಲ. ಮೊಡವೆ ಬರಲು ಆಸ್ಪದವೇ ಇರುವುದಿಲ್ಲ.

ವಾರದಲ್ಲಿ ಒಮ್ಮೆಯಾದರೂ ಕೆಲವು ನಿಮಿಷಗಳನ್ನು ತೆಗೆದಿಟ್ಟು ಕಡಲೇ ಹಿಟ್ಟು -ಮೊಸರು ಇಲ್ಲವೇ ಅಂಗಡಿಯಲ್ಲಿ ದೊರಕುವ ಸ್ಕ್ರಬ್ ಮಾಡಿಕೊಳ್ಳಿ.ಇದರಿಂದ ಚರ್ಮದಲ್ಲಿ ಶೇಖರವಾಗಿರುವ ನಿರ್ಜೀವ ಕಣಗಳು ದೂರವಾಗುತ್ತದೆ.
ರಾತ್ರಿವೇಳೆಯಲ್ಲಿ ಮಾತ್ರ ಹಚ್ಚುವಂತಹ ಕಣ್ಣಿನ ಕ್ರೀಂ (ಅಂಗಡಿಗಳಲ್ಲಿ ಲಭ್ಯ)
ಲೇಪಿಸಿ. ಇದು ಕಣ್ಣಿನ ಕೆಳಗೆ ಇರುವ ಕಪ್ಪು ವರ್ತುಲ ಮತ್ತು ದಣಿದಂತೆ ಕಾಣುವ ಸಮಸ್ಯೆಯನ್ನು ದೂರ ಮಾಡುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

ಮಹಿಳೆಯರಿಗೆ ಎಂತಹ ಪುರುಷರು ಇಷ್ಟವಾಗುತ್ತಾರೆ ಗೊತ್ತಾ ?

ಆಚಾರ್ಯ ವಾತ್ಸಾಯನ ರಚಿತ ಕಾಮಸೂತ್ರ ಪುಸ್ತಕದಲ್ಲಿ ಮಹಿಳೆಯರು ಎಂತಹ ಪುರುಷರನ್ನು ಇಷ್ಟಪಡುತ್ತಾರೆಂದು ...

ಸೌಂದರ್ಯದಿಂದ ಕಂಗೊಳಿಸಲು ಚರ್ಮದ ರಕ್ಷಣೆಗೆ - ಒಂದಷ್ಟು ಸಲಹೆಗಳು

ಸೌಂದರ್ಯ ಎಂಬುದು ಚರ್ಮದಲ್ಲಿ ಅಡಗಿದೆ ಎಂಬ ಮಾತು ಜೀವನವನ್ನು ತಾತ್ವಿಕತೆಯೊಂದಿಗೆ ಥಳುಕು ಹಾಕಲು ಹಲವಾರು ...

ನಿಮ್ಮ ಮದುವೆಯ ಕ್ಷಣಗಳ ಪರಿಪೂರ್ಣ ಅಂದಕ್ಕೆ ಯಾವುದೂ ಸರಿಸಾಟಿಯಲ್ಲ-ಏನು ಮಾಡಿದರು ಅತಿಯಲ್ಲ

ಮದುವೆ ಸುಗ್ಗಿಯ ಭರಾಟೆ ತಾರಕಕ್ಕೇರುತ್ತಿದ್ದಂತೆಯೇ , ಅದರ ಜೊತೆ ಸಲೋನ್ ಮತ್ತು ಬ್ಯೂಟಿ ಪಾರ್ಲರ್‌ಗಳಿಗೂ ...

ಮುಖದ ಸೌಂದರ್ಯಕ್ಕೆ ನಿಮ್ಮ ಅಡುಗೆ ಮನೆಯಲ್ಲೇ ಪರಿಹಾರ!

ಅಂದದ ಮುಖದ ಕನಸು ಕಾಣದವರಿಲ್ಲ. ಆದರೂ, ಏನೇ ಮಾಡಿದರೂ, ಮೊಡವೆ, ಕಪ್ಪು ಕಲೆ, ಕಳಾಹೀನ ಮುಖ... ಹೀಗೆ ಒಂದೇ, ...