Widgets Magazine

ಚಳಿಗಾಲದಲ್ಲಿ ಕೂದಲ ರಕ್ಷಣೆ ಅವಶ್ಯ

ವೆಬ್‌ದುನಿಯಾ|
PR
ಚಳಿಗಾಲದಲ್ಲಿ ಹೆಚ್ಚಾಗಿ ನಾವು ಚರ್ಮದ ಬಗ್ಗೆ ಮಾತ್ರ ಗಮನ ನೀಡುತ್ತೇವೆ. ಒಣಗದಂತೆ, ತುಟಿ ಒಡೆಯದಂತೆ ಕಾಪಾಡುತ್ತೇವೆ. ಆದರೆ ಬೇರುಗಳನ್ನು ನಿರ್ಲಕ್ಷಿಸುತ್ತೇವೆ. ಚಳಿಗಾಲದಲ್ಲಿ ಕೂದಲ ರಕ್ಷಣೆ ಎಂದರೆ ಕೇಶ ವಿನ್ಯಾಸ ಮಾತ್ರವಲ್ಲ,, ತಲೆ ಬುರುಡೆ ಶುಷ್ಕವಾಗದಂತೆ, ತುರಿಕೆಯುಂಟಾಗದಂತೆ ನೋಡಿಕೊಳ್ಳುವುದೂ ಆಗಿದೆ. ಈ ನಿಟ್ಟಿನಲ್ಲಿ ಹೇರ್‌ಲೈನ್ ಇಂಟರ್‌ನ್ಯಾಷನಲ್‌ನ ವೈದ್ಯೆ ಡಾ. ವೃಷಾಲಿ ಢೋಲೆ ಏನು ಹೇಳುತ್ತಾರೆ?.
ನೈಸರ್ಗಿಕವಾಗಿರಲಿ: ಉದ್ದ ಕೂದಲುಳ್ಳವರು ಚಳಿಗಾಲದಲ್ಲಿ ಶೀತದಿಂದ ರಕ್ಷಣೆ ಪಡೆಯಲು ತಲೆ ತೊಳೆದಾಗಲೆಲ್ಲ ಹೇರ್ ಡ್ರೈಯರ್ ಬಳಸುವುದು ಸಾಮಾನ್ಯ. ಮನೆಯಿಂದಾಚೆ ಹೊರಡುವ ಮುನ್ನ ನೀರಿಳಿಯದೇ ಇರಲಿ ಎಂಬ ಎಚ್ಚರಿಕೆ ಎಲ್ಲರದು. ಆದರೆ ಕೆಲವೊಮ್ಮೆ ಸ್ಟ್ರೇಟ್ನಿಂಗ್ ಹಾಗೂ ಡ್ರೈಯರ್ ಬಳಸುವುದು ಅಪಾಯಕಾರಿಯಾಗಬಹುದು. ಅತಿ ಹೆಚ್ಚಿನ ಉಷ್ಣದಿಂದ ಕೂದಲಿಗೆ ಹಾನಿಯಾಗುತ್ತದೆ.


ಇದರಲ್ಲಿ ಇನ್ನಷ್ಟು ಓದಿ :