Widgets Magazine

ನಿಮ್ಮ ಮುಖದ ಸಮಸ್ಯೆಗೆ ನಿಮ್ಮಲ್ಲೇ ಇದೆ ಸೂಕ್ತ ಪರಿಹಾರ!

ಇಳಯರಾಜ|
IFM
ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳೋದು ರಗಳೆ ಕೆಲಸ, ಒಂದೋ ಅಲ್ಲಿ ಗಂಟೆ ಗಟ್ಟಲೆ ಕಾಯಬೇಕು ಇಲ್ಲವೇ, ಅವರ ಸಮಯಕ್ಕೆ ಸರಿಯಾಗಿ ನಾವು ಹೋಗಬೇಕು ಎಂದೆಲ್ಲ ನಿಮಗೆ ಅನಿಸುತ್ತಿದ್ದರೆ, ಯಾಕೆ ಬೇಸರ ಮಾಡಿಕೊಳ್ಳುತ್ತೀರಿ ಹೇಳಿ? ಅಡುಗೆ ಮನೆಯಲ್ಲೇ ಹಲವಾರು ನೈಸರ್ಗಿಕ ಕೊಡುಗೆಗಳು ನಿಮಗಾಗಿ ಕಾದಿವೆ. ಸ್ವಲ್ಪವೇ ಸ್ವಲ್ಪ ಬಿಡುವು ಮಾಡಿಕೊಂಡು, ನಿಮ್ಮ ಚರ್ಮ ಯಾವ ಮಾದರಿಯದ್ದು ಎಂದು ತಿಳಿದುಕೊಂಡು ಚರ್ಮಕ್ಕೆ ಹೊಂದುವಂಥ ಆಯ್ಕೆಯನ್ನು ನೀವು ಮನೆಯಲ್ಲೇ ಮಾಡಿಕೊಳ್ಳಬಹುದು.
3. ಕ್ಯಾಬೇಜನ್ನು ಅರೆದು ಅದರ ರಸವನ್ನು ಮುಖಕ್ಕೆ ಹಚ್ಚಿ. ಇದು ಸಡಿಲವಾದ ಚರ್ಮವನ್ನು ಟೈಟ್ ಮಾಡುವುದಲ್ಲದೆ, ಸುಕ್ಕುಗಳಿಂದಲೂ ಮುಕ್ತಿ ನೀಡುತ್ತದೆ.
6. ಪ್ರತಿದಿನವೂ ಮುಖ ತೊಳೆದ ನಂತರ ಐಸ್ ತುಂಡನ್ನು ಮುಖಕ್ಕೆ ವರ್ತುಲಾಕಾರದಲ್ಲಿ ಒತ್ತಿ ಉಜ್ಜಿ. ಇದು ಮುಖದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚು ಮಾಡುವ ಮೂಲಕ ಮುಖಕ್ಕೆ ತಾಜಾ ರಕ್ತದ ಪೂರಣವಾಗುತ್ತದೆ. ಹಾಗಾಗಿ ಮುಖದ ಹೊಳಪು ಹೆಚ್ಚುತ್ತದೆ.
8. ಮೊಟ್ಟೆಯ ಬಿಳಿ ಲೋಳೆಯನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಒಣಗಿದ ಮೇಲೆ ಸ್ವಲ್ಪ ಹೊತ್ತು ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದು ಮುಖದ ಚರ್ಮವನ್ನು ಟೈಟ್ ಮಾಡುತ್ತದೆ. ಅಲ್ಲದೆ ಸುಕ್ಕನ್ನೂ ತಡೆಗಟ್ಟುತ್ತದೆ.
1. ಗೋಧಿ ಹುಡಿಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದು ಮುಖದಲ್ಲಿರುವ ಹೆಚ್ಚಿನ ಎಣ್ಣೆಯಂಶವನ್ನು ತೆಗೆದುಹಾಕಿ ಚರ್ಮವನ್ನು ಫ್ರೆಶ್ ಆಗಿಸುತ್ತದೆ.
3. ಎರಡು ಚಮಚ ಮೆಂತೆಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಹಾಕಿ. ಬೆಳಿಗ್ಗೆ ಮೆಂತೆಯನ್ನು ಅರೆದು ಪೇಸ್ಟ್ ಮಾಡಿ. ಚೆನ್ನಾಗಿ ಈ ಪೇಸ್ಟಿನಿಂದ ಮುಖಕ್ಕೆ ಮಸಾಜ್ ಮಾಡಿ ಹಾಗೆಯೇ ಬಿಟ್ಟು ಒಣಗಿದ ಮೇಲೆ ತೊಳೆಯಿರಿ. ಪೇಸ್ಟ್ ಉಳಿದರೆ ಎಸೆಯದೆ ಹಾಗೆಯೇ ಫ್ರಿಜ್ಜಿನಲ್ಲಿ ಮುಚ್ಚಳವಿರುವ ಡಬ್ಬದಲ್ಲಿ ಹಾಕಿಡಿ. ಒಂದು ವಾರ ದಿನವೂ ಉಪಯೋಗಿಸುತ್ತಿರಬಹುದು.
5. ಸೌತೆಕಾಯಿಯನ್ನು ತುರಿದು ಅರೆದು ರಸ ತೆಗೆದು ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತೊಳೆದರೆ ಮುಖ ಫ್ರೆಶ್ ಆಗುತ್ತದೆ. ಅಲ್ಲದೆ ಚರ್ಮವನ್ನೂ ಬಿಗಿಗೊಳಿಸುತ್ತದೆ. ಮುಖದ ಕಲೆಗಳನ್ನೂ ಇದು ತೊಡೆದುಹಾಕುತ್ತದೆ.
2. ಗಸಗಸೆಯನ್ನು ರಾತ್ರಿಯಿಡೀ ನೆನೆ ಹಾಕಿ ಬೆಳಿಗ್ಗೆ ಹಾಲಿನಲ್ಲಿ ಅರೆದು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ. ಗಸಗಸೆಯಲ್ಲಿರುವ ನೈಸರ್ಗಿಕ ತೈಲ ಮುಖಕ್ಕೆ ಬೇಕಾಗಿರುವ ತೈಲಾಂಶ ನೀಡಿ ಮಾಯ್‌ಶ್ಚರೈಸ್ ಮಾಡುತ್ತದೆ.
4. ಮೂರ್ನಾಲ್ಕು ಹಸಿ ನೆಲಗಡಲೆಯನ್ನು ಹಾಲಿನಲ್ಲಿ ಅರೆದು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ವ ಹೊತ್ತು ಬಿಟ್ಟು ತೊಳೆದರೆ ಇದು ಕೂಡಾ ಮುಖಕ್ಕೆ ಬೇಕಾದ ತೈಲಾಂಶವನ್ನು ನೀಡಿ ಮಾಯ್‌ಶ್ಚರೈಸ್ ಮಾಡುತ್ತದೆ.
2. ನಿಂಬೆ ಹುಲ್ಲನ್ನು ನೀರಿಗೆ ಹಾಕಿ ಪರಿಮಳ ಹೊರಬರುವವರೆಗೆ ಚೆನ್ನಾಗಿ ಕುದಿಸಿ ಆ ನೀರನ್ನು ಟ್ರೇಯಲ್ಲಿ ಹಾಕಿ ಫ್ರೀಜರಿನಲ್ಲಿಟ್ಟು ಗಟ್ಟಿ ಮಾಡಿ. ಪ್ರತಿ ದಿನ ಕೆಲಸಕ್ಕೆ ಅಥವಾ ಹೊರಗೆ ಹೋಗಿ ಬಂದ ಮೇಲೆ ಮುಖ ತೊಳೆದು ನಿಂಬೆ ಹುಲ್ಲಿನ ನೀರಿನ ಐಸ್ ತುಂಡಿನಿಂದ ಮುಖವನ್ನು ಉಜ್ಜಿ. ಇದು ನಿಮ್ಮ ಚರ್ಮವನ್ನು ತಾಜಾ ಆಗಿಸಿ ಎಲ್ಲಾ ಕೊಳೆಯನ್ನೂ ತೊಡೆದುಹಾಕುತ್ತದೆ.
3. ಮುಕ್ಕಾಲು ಕಪ್ ಟೊಮ್ಯಾಟೋ ರಸಕ್ಕೆ ಅರ್ಧ ತುಂಡು ನಿಂಬೆಯನ್ನು ಹಿಂಡಿ ಅದಕ್ಕೆ ನಾಲ್ಕೈದು ಪುದಿನ ಸೊಪ್ಪಿನ ಪೇಸ್ಟನ್ನು ಸೇರಿಸಿ. ಬೇಕಿದ್ದರೆ ರುಚಿಗಾಗಿ ಸ್ವಲ್ಪ ಉಪ್ಪನ್ನು ಹಾಕಿ ಒಂದು ವಾರ ಬೆಳಿಗ್ಗೆ ಹಾಗೂ ರಾತ್ರಿ ಕುಡಿದರೆ ಮುಖದ ಚರ್ಮದ ತೊಂದರೆಗಳು ನೀಗುತ್ತದೆ. ಇದು ಚರ್ಮದೊಳಗಿನ ವಿಷಕಾರಕಗಳನ್ನು ತೊಡೆದುಹಾಕಿ ಚರ್ಮವನ್ನು ಒಳಗಿನಿಂದ ಪರಿಶುದ್ಧಗೊಳಿಸುತ್ತದೆ. ಮಲಬದ್ಧತೆ, ಹೊಟ್ಟೆ ಹುಳುಗಳ, ಜಂತುಗಳ ತೊಂದರೆಗೂ ಇದು ಮುಕ್ತಿ ನೀಡುತ್ತದೆ.
4. ನಿಂಬೆಹಣ್ಣಿನ ರಸವನ್ನು ಮುಖಕ್ಕೆ ಹಚ್ಚಿ ರಾತ್ರಿ ಮಲಗಿ ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ತೊಳೆದರೆ ಮುಖಕ್ಕೆ ತಾಜಾ ಹೊಳಪು ಬರುವುದಲ್ಲದೆ, ಚರ್ಮ ಮೃದುವಾಯಿ ನಯವಾಗುತ್ತದೆ.


ಇದರಲ್ಲಿ ಇನ್ನಷ್ಟು ಓದಿ :