ಸ್ಯಾಂಡಲ್ವುಡ್, ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗದ ನಟ-ನಟಿಯರ ಫಿಟ್ನೆಸ್ ಗುಟ್ಟು ಯೋಗ. ಫಿಟ್ನೆಸ್ಗಾಗಿ ಯೋಗದ ಮೊರೆ ಹೋಗಿರುವ ಚಿತ್ರತಾರೆಯ ಪಟ್ಟಿಯೇ ಇದೆ. ಇವರಲ್ಲಿ ಬಾಲಿವುಡ್ ತಾರೆಯರು ಹೆಚ್ಚು ಮುಂಚೂಣಿಯಲ್ಲಿದ್ದಾರೆ. * ಶಿಲ್ಪಾ ಶೆಟ್ಟಿ: ಶಿಲ್ಪಾ ಶೆಟ್ಟಿ ಭಾರತದ ಯೋಗ ಐಕಾನ್ ಅಗಿದ್ದಾರೆ. ಬಳ್ಳಿಯಂತೆ ಬಳುಕುವ, ಅಂದವಾದ ದೇಹವನ್ನು ಪಡೆಯಲು ಯೋಗ ಸಹಕಾರಿಯಾಯಿತು ಎನ್ನುತ್ತಾರೆ. * ಬಿಪಾಶಾ ಬಸು: ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಯೋಗ ಕಾರ್ಯಾಗಾರವನ್ನು ಇವರು ಮಾಡಿದ್ದಾರೆ.