ಇಂದಿನ ದಿನಗಳಲ್ಲಿ ಪೂರಷರೂ ಸಹ ಮಹಿಳೆಯರಷ್ಟೇ ಸೌಂದರ್ಯ ಪ್ರಜ್ಞೆಯನ್ನು ಹೊಂದಿದ್ದಾರೆ. ಅವರಿಗಾಗೇ ಹಲವಾರು ಸೌಂದರ್ಯ ಸಾಧನಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿವೆ. ಹೀಗಿದ್ದರೂ ಸಹ ಹಲವರು ತಮ್ಮ ಸೌಂದರ್ಯದ ಕುರಿತು ಕಾಳಜಿವಹಿಸುವುದಿಲ್ಲ. ಅವರಿಗೆ ಚರ್ಮದ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಅವಶ್ಯಕತೆಯಿರುತ್ತದೆ. ಕೇವಲ ಫೇಸ್ವಾಶ್ ಅನ್ನು ಹಾಕಿ ಮುಖ ತೊಳೆಯುವುದು ಮತ್ತು ಫೇಸ್ ಪ್ಯಾಕ್ ಹಾಕಿಕೊಳ್ಳುವುದು ಸಾಲುವುದಿಲ್ಲ. ವಾತಾವರಣದ ಬದಲಾವಣೆ ಅಥವಾ ಇನ್ನಿತರ ಬದಲಾವಣೆಗಳಿಂದ ನಿಮ್ಮ ಚರ್ಮದ ಮೇಲಾಗುವ ಪರಿಣಾಮಗಳನ್ನು ತಿಳಿದುಕೊಳ್ಳಬೇಕಾಗಿದೆ. ಅದಕ್ಕಾಗಿ ಈ