ಬೆಂಗಳೂರು: ಟ್ಯಾಟೂ ಹಾಕಿಸಿಕೊಳ್ಳುವ ಹುಚ್ಚು ನಿಮಗಿದೆಯೇ? ಹಾಗಿದ್ದರೆ ನೀವು ಎಚ್ಚರವಿರಲೇಬೇಕು. ಅದು ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ನೀವು ಗಮನಹರಿಸಬೇಕು. ಕೆಲವರಿಗೆ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಅಲರ್ಜಿ ಮತ್ತಿತರ ಸಮಸ್ಯೆಗಳು ತಲೆದೋರುತ್ತವೆ. ಕೈಯಲ್ಲಿ ಕೆಂಪಗಿನಗ ಗುಳ್ಳೆಗಳಾಗುವುದು, ತುರಿಕೆ, ಚರ್ಮ ಬಣ್ಣ ಕಳೆದುಕೊಳ್ಳುವುದು ಇತ್ಯಾದಿ ಸಮಸ್ಯೆಗಳೂ ಬರಬಹುದು.ಗಾಯವಾದ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಗಾಯಗಳಲ್ಲಿ ಸೋಂಕುಂಟಾಗಿ ಅದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಬಹುದು. ಒಂದೊಂದು ದೇಹ ಪ್ರಕೃತಿಯವರಿಗೆ ಒಂದೊಂದು ಥರದ ಸೋಂಕುಂಟಾಗುವ