ಬೆಂಗಳೂರು: ತೂಕ ಕಳೆದುಕೊಳ್ಳಲು ಬಯಸುವವರು ಪ್ರತಿನಿತ್ಯ ಖಾಲಿಹೊಟ್ಟೆಯಲ್ಲಿ ನಿಂಬೆ ರಸ ಮತ್ತು ಜೇನು ತುಪ್ಪ ಸೇರಿಸಿಕೊಂಡು ಹದ ಬಿಸಿ ನೀರು ಸೇವಿಸಬೇಕು ಎನ್ನಲಾಗುತ್ತದೆ. ನಿಂಬೆ ರಸದ ಪಾನೀಯ ಸೇವಿಸುವುದರಿಂದ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ? ಕ್ಯಾಲೊರಿ ಕಡಿಮೆ ನಿಂಬೆ ರಸ ಸೇರಿಸಿದ ಪಾನೀಯದಲ್ಲಿ ಕ್ಯಾಲೋರಿ ಕಡಿಮೆಯಿರುತ್ತದೆ. ಹೀಗಾಗಿ ತೂಕ ಕಳೆದುಕೊಳ್ಳುವವರಿಗೆ ಇದು ಉತ್ತಮ ಪಾನೀಯ.ಮೆಟಾಬೋಲಿಸಂ ಹೆಚ್ಚಿಸುತ್ತದೆ ನಿಂಬೆ ಪಾನೀಯ ಸೇವಿಸುವುದರಿಂದ ದೇಹದಲ್ಲಿ ಮೆಟಾಬೋಲಿಸಂ ಅಂಶ ಹೆಚ್ಚುತ್ತದೆ. ಪರಿಣಾಮ ತೂಕ ಕಡಿಮೆಯಾಗುತ್ತದೆ.