ನಮ್ಮ ಪೃಕೃತಿಯ ಕೊಡುಗೆಯಾದ ಸಹಜ ಸೌಂದರ್ಯವನ್ನು ಕಾಪಾಡಿಕೊಳ್ಳುವುದೂ ಸಹ ಒಂದು ರೀತಿಯ ಕಲೆಯೇ ಸರಿ. ಈಗಿನ ವಿದ್ಯಮಾನದಲ್ಲಿ ಸಹಜ ಸೌಂದರ್ಯಕ್ಕೆ ಬೆಲೆಯೇ ಇಲ್ಲದಂತಾಗಿದೆ. ಹುಟ್ಟಿದ ಪ್ರತಿಯೊಬ್ಬರಲ್ಲೂ ಒಂದು ವಿಶಿಷ್ಟ ಸೌಂದರ್ಯವಿರುತ್ತದೆ. ಕೆಲವರು ಮುಗುಳ್ನಕ್ಕರೂ ಸಾಕು ಅವರ ಚೆಲುವು ಇಮ್ಮಡಿಗೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಪಾಲಿಸುತ್ತಿದ್ದ ಹಣೆಗೆ ಚೆಂದದ ಬೊಟ್ಟು, ಬೆನ್ನಿನ ಮೆಲೆ ಹೆದ್ದಾರಿಯ ಹಾಗೆ ಕಾಣಿಸುತ್ತಿದ್ದ ಕೂದಲು, ಆ ಕೂದಲಿಗೆ ಹೂ, ಮೂಗಿಗೆ ನತ್ತು, ಕೊರಳಿಗೆ ಸರ, ಕೈಗೆ ಬಳೆ ಹೀಗೆ