ಸಬ್ಬಕ್ಕಿಯನ್ನು ನಾವು ಸಾಮಾನ್ಯವಾಗಿ ಪಾಯಸ ಮಾಡುವಾಗ ಬಳಸುತ್ತೇವೆ. ಅದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಐರನ್ ಅಂಶಗಳು ಯಥೇಚ್ಛವಾಗಿವೆ. ಕೇವಲ ಆಹಾರ ಪದಾರ್ಥಗಳಲ್ಲಿ ಅಷ್ಟೇ ಅಲ್ಲದೇ ಸಬ್ಬಕ್ಕಿಯನ್ನು ಸೌಂದರ್ಯವರ್ಧನೆಯಲ್ಲಿಯೂ ಬಳಸಬಹುದು. - ಮುಖ ಕಪ್ಪಗಾಗಿದೆ ಎಂದೆನಿಸಿದರೆ ಸಬ್ಬಕ್ಕಿಯನ್ನು ಪುಡಿ ಮಾಡಿ ಅದರಲ್ಲಿ ಹಾಲನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತಿನ ನಂತರ ತೊಳೆಯುವುದರಿಂದ ಮುಖದ ಬಣ್ಣ ಬಿಳಿಯಾಗುತ್ತದೆ. - ಸಬ್ಬಕ್ಕಿ ಪುಡಿಯನ್ನು ಮೊಸರಿನೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದಲೂ