ಮದುವೆ ದಿನ ವಧುವಿನ ಬಳಿ ಹೇಳಲೇಬಾರದ ಆ ಮೂರು ವಿಚಾರಗಳು!

ಬೆಂಗಳೂರು| Krishnaveni K| Last Modified ಬುಧವಾರ, 22 ಆಗಸ್ಟ್ 2018 (09:26 IST)
ಬೆಂಗಳೂರು: ಮದುವೆ ದಿನ ಎನ್ನುವುದು ಯಾವುದೇ ಗಂಡು-ಹೆಣ್ಣಿನ ಬಾಳಲ್ಲಿ ಮಹತ್ವದ ದಿನ. ಆ ದಿನದ ಸಂತೋಷವನ್ನು ಯಾವುದೇ ಕಾರಣಕ್ಕೂ ಇಬ್ಬರೂ ಹಾಳು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾಗಿ ವಧುವಿನ ಬಳಿ ಈ ಮೂರು ವಿಚಾರಗಳನ್ನು ಹೇಳಲೇಬೇಡಿ!


ಡ್ರೆಸ್
ಮದುವೆ ದಿನ ಸಹಜವಾಗಿಯೇ ವಧುವಿಗೆ ಸುಂದರ ಅಲಂಕಾರ ಮಾಡಲಾಗುತ್ತದೆ. ಆದರೆ ಆಕೆಗೆ ಹತ್ತಿರವಾಗುವ ನಿಟ್ಟಿನಲ್ಲಿ ಆಕೆಯ ಬಳಿ ಹೋಗಿ ನಿನ್ನ ಅಲಂಕಾರ, ಡ್ರೆಸ್ ಚೆನ್ನಾಗಿಲ್ಲ ಎಂದೋ, ಆ ಉಡುಪಿನ ಬಗ್ಗೆ ನಿಮ್ಮ ಕಾಮೆಂಟ್ ಮಾಡುತ್ತಾ ಕೂರಬೇಡಿ. ಇದು ಆಕೆಗೆ ಇಷ್ಟವಾಗಲ್ಲ.


ನನ್ನ ಮದುವೆಯಾಗಿದ್ರೆ...!
ಕೆಲವರಿಗೆ ಇಂತಹದ್ದೊಂದು ಚಾಳಿಯಿದೆ. ಯಾರದೋ ಮದುವೆಯಲ್ಲಿ ಯಾರದೋ ಮದುವೆಯ ಸಂಭ್ರಮವನ್ನು ತಾಳೆ ಹಾಕುವುದು ಅಥವಾ ನನ್ನ ಮದುವೆಯಾಗಿದ್ರೆ ಹೀಗೆ ಮಾಡ್ತಿದ್ದೆ ಎಂದೆಲ್ಲಾ ಕೊಚ್ಚಿಕೊಳ್ಳುವುದು. ಇದನ್ನು ನವವಧು ಖಂಡಿತಾ ಸಹಿಸಲ್ಲ.


ಬಜೆಟ್ ಬಗ್ಗೆ
ಮದುವೆಗೆ ಹೆತ್ತವರು ಎಷ್ಟೇ ಕಡಿಮೆ ಅಥವಾ ಹೆಚ್ಚು ಖರ್ಚು ಮಾಡಿರಲಿ. ಅದರ ಬಗ್ಗೆ ಕಾಮೆಂಟ್ ಮಾಡುವುದು, ಎಷ್ಟು ಕಡಿಮೆ ಬಜೆಟ್ ನಲ್ಲಿ ಮದುವೆ ಮುಗಿಸಿಬಿಟ್ರಿ ಎಂದು ಹೊಗಳುವ ನೆಪದಲ್ಲಿ ಲೈಟಾಗಿ ಲೇವಡಿ ಮಾಡುವುದು ಮಾಡಲೇಬೇಡಿ!


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :