ಬೆಂಗಳೂರು: ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಸೊಂಪಾಗಿ ಕೂದಲು ಬೆಳೆಸಬೇಕೆಂದು ಆಸೆಯೇ? ಹಾಗಿದ್ದರೆ ಈ ಕೆಳಗಿನ ಆಹಾರಗಳನ್ನು ಪ್ರತಿ ನಿತ್ಯ ಆಹಾರದಲ್ಲಿ ಬಳಸಿದರೆ ಸಾಕು! ಮೊಟ್ಟೆ ದಿನಕ್ಕೆ ಒಂದು ಮೊಟ್ಟೆ ತಿನ್ನುತ್ತಿದ್ದರೆ ಆರೋಗ್ಯಕ್ಕೆ ಮಾತ್ರವಲ್ಲ, ಕೂದಲುಗಳ ಬೆಳವಣಿಗೆಗೂ ಉತ್ತಮ. ಕೂದಲು ಉದುರುವಿಕೆ, ತಲೆಹೊಟ್ಟಿನ ಸಮಸ್ಯೆಯಿದ್ದರೆ ಮೊಟ್ಟೆಯ ಹಳದಿಯ ಮಸಾಜ್ ಕೂಡಾ ಉತ್ತಮ.ಬಸಳೆ ಸೊಪ್ಪು ಬಸಳೆ, ಪಾಲಕ್ ಮುಂತಾದ ಸೊಪ್ಪು ತರಕಾರಿಗಳಲ್ಲಿ ಕೂದಲಿನ ಅಂಗಾಂಶ ಗಟ್ಟಿಗೊಳಿಸುವ ಪೋಷಕಾಂಶವಿದೆ. ದೇಹದಲ್ಲಿ ಕಬ್ಬಿಣದಂಶ,