ಬೆಂಗಳೂರು:ಆಕರ್ಷಕವಾಗಿ ಕಾಣಲು, ಮುಖದ ಅಂದವನ್ನು ಇಮ್ಮಡಿಗೊಳಿಸಲು ಯುವತಿಯರು ಕಣ್ಣಿನ ಸೌಂದರ್ಯದ ಬಗ್ಗೆ, ಅದರ ಮೇಕಪ್ ಬಗ್ಗೆ ತುಂಬಾನೆ ತಲೆ ಕೆಡಿಸಿಕೊಳ್ಳುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮೇಕಪ್ ಅಂದಾಕ್ಷಣ ಐ ಮೇಕಪ್ ಬಗ್ಗೆನೇ ಹೆಚ್ಚಿನ ಚರ್ಚೆಗಳು ನಡೆಯುತ್ತಿದೆ. ಕಣ್ಣಿಗೆ ಎಷ್ಟು ಅಲಂಕಾರಗಳನ್ನು ಮಾಡಿದರೂ ಇನ್ನೂ ಏನೋ ಕಮ್ಮಿ ಅನ್ನೋ ಭಾವನೆ. ನಿಮ್ಮ ಕಣ್ಣುಗಳು ಆಕರ್ಷಕವಾಗಿ ಕಾಣಲು ಯಾವೆಲ್ಲ ರೀತಿಯ ಮೇಕಪ್ ಮಾಡಬಹುದು, ಹೊಸ ಬಗೆಯ ಐ ಮೇಕಪ್ ಟ್ರೆಂಡ್ ಯಾವುದು ಎಂಬ