ಬೆಂಗಳೂರು: ಹಲಸಿನ ಹಣ್ಣಿನಲ್ಲಿ ಸುಮ್ಮನೇ ಬಿಸಾಕುವ ಭಾಗವೆಂದರೆ ಹೊರಗಿನ ಆವರಣ ಮಾತ್ರ. ಉಳಿದ ಭಾಗವೆಲ್ಲಾ ಒಂದೊಂದು ರೀತಿಯಲ್ಲಿ ಉಪಯೋಗಕ್ಕೆ ಬರುವಂತಹದ್ದೇ. ಹಲಸಿನ ಬೀಜ ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಎನ್ನುವವರೆಲ್ಲಾ ಇದನ್ನು ತಿಳಿದುಕೊಳ್ಳಲೇ ಬೇಕು. ಹಲಸಿನ ಬೀಜ ತಿಂದರೆ ಆರೋಗ್ಯ ಉತ್ತಮವಾಗುವುದಷ್ಟೇ ಅಲ್ಲ, ಸೌಂದರ್ಯಕ್ಕೂ ಒಳ್ಳೆಯದು.ಚರ್ಮ ಸುಕ್ಕುಗಟ್ಟುವುದು ಮುಖದ ಚರ್ಮ ಕಾಂತಿಯುತವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಮುಖದ ಚರ್ಮ ಸುಕ್ಕುಗಟ್ಟಿದ್ದರೆ, ಹಾಲಿನೊಂದಿಗೆ ಹಲಸಿನ ಬೀಜವನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ