ಬೆಂಗಳೂರು: ಹೋಲಿ ಹಬ್ಬ ಇನ್ನೇನು ಬಂದೇ ಬಿಟ್ಟಿತು. ಹೋಲಿ ಎಂದಾಕ್ಷಣ ಬಣ್ಣದ ಓಕುಳಿ ಇದ್ದೇ ಇರುತ್ತದೆ. ಬಣ್ಣದ ನೀರು ಕೆಲವೊಮ್ಮೆ ಚರ್ಮ, ಕೂದಲುಗಳಿಗೆ ಹಾನಿ ಮಾಡಬಹುದು. ಇದರಿಂದ ರಕ್ಷಿಸಿಕೊಳ್ಳಲು ಕೆಲವು ಟಿಪ್ಸ್ ಇಲ್ಲಿದೆ ನೋಡಿ. · ಬಣ್ಣದ ಓಕುಳಿ ಆಡುವ ಮೊದಲು ಮತ್ತು ನಂತರ ಚರ್ಮಕ್ಕೆ ಉತ್ತಮ ಸನ್ ಸ್ಕ್ರೀನ್ ಮತ್ತು ತೇವಾಂಶದ ಕ್ರೀಂ ಬಳಸಿ. · ಮುಖ ಮತ್ತು ದೇಹದ ಭಾಗಗಳಿಗೆ ವ್ಯಾಸಲಿನ್, ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಿ.