ಸೌಂದರ್ಯವರ್ಧಕಗಳನ್ನು ಬಳಸುವ ಮೂಲಕ ಸೌಂದರ್ಯವನ್ನು ಹೆಚ್ಚಿಸಕೊಳ್ಳಬಹುದು, ಅದರೆ ಈ ಸೌಂದರ್ಯವರ್ಧಕಗಳಲ್ಲಿ ಕೆಲವೊಂದು ನೈಸರ್ಗಿಕವಾಗಿದ್ದರೆ ಇನ್ನು ಕೆಲವು ರಾಸಾಯನಿಕವಾಗಿರುತ್ತವೆ. ಸೌಂದರ್ಯವನ್ನು ವದ್ಧಿಗೊಳಿಸಿ, ತ್ವಚೆಯನ್ನು ಕೋಮಲವಾಗಿರಿಸುವ ಅದ್ಭುತ ಶಕ್ತಿ ರೋಸ್ ವಾಟರ್ಗಿದೆ. ರೋಸೇಸಿ, ಇಸಬು (ಎಸ್ಜಿಮಾ ) ಮತ್ತು ಶುಷ್ಕತೆಯಂತಹ ಚರ್ಮದ ಕಿರಿಕಿರಿಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಇದನ್ನು ಫೇಸ್ ಕ್ಲೆನ್ಲರ್, ಮೊಡವೆ ನಿವಾರಣೆ ಮಾಡಲು, ಕೂದಲಿನ ಕಂಡೀಶನರ್ನಂತೆ, ಕಣ್ಣಿನ ಆರೈಕೆಗೆ, ಟೋನರ್ನಂತೆ, ಒಣಚರ್ಮದ ಸಮಸ್ಯೆಯನ್ನು ಕಡಿಮೆ ಮಾಡಲು ಬಳಸಬಹುದು.