ಬೆಂಗಳೂರು: ಮಶ್ರೂಮ್ ಕರಿ ಎಂದರೆ ನಿಮಗೆ ಇಷ್ಟವೇ? ಹಾಗಿದ್ದರೆ ಇನ್ನು ಹೆಚ್ಚು ಹೆಚ್ಚು ತಿನ್ನಿ! ಯಾಕೆಂದರೆ ಇದರ ಸೇವನೆಯಿಂದ ಚರ್ಮಕ್ಕಾಗುವ ಲಾಭ ಅಪಾರ. ಅದರಲ್ಲೂ ವಿಶೇಷವಾಗಿ ಇದನ್ನು ಸೇವಿಸುತ್ತಿದ್ದರೆ ವಯಸ್ಸಾಗಿದ್ದೇ ಗೊತ್ತಾಗಲ್ವಂತೆ! ಇದರಲ್ಲಿ ವಿಟಮಿನ್ ಬಿ ಅಂಶ ಹೇರಳವಾಗಿದ್ದು, ಆತಂಕ, ಒತ್ತಡ ಹತ್ತಿರವೂ ಸುಳಿಯದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಪೋಷಕಾಂಶಗಳು ಚರ್ಮಕ್ಕೆ ಕಾಂತಿ ಒದಗಿಸುತ್ತವೆ.ಇದು ಚರ್ಮದ ತೇವಾಂಶವನ್ನು ಉಳಿಸುತ್ತದೆ. ಇದರಲ್ಲಿರುವ ಪೋಷಕಾಂಶ ನಿಮ್ಮ ಚರ್ಮವು ಅವಧಿಗೆ ಮೊದಲೇ