ಒಂದೇ ದಿನದಲ್ಲಿ ಮೆಹೆಂದಿಯನ್ನು ತೆಗೆಯಬಹುದೆಂತೆ!!!!

ಶುಕ್ರವಾರ, 20 ಜುಲೈ 2018 (17:49 IST)

ಮೆಹೆಂದಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ! ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನ ಮಹಿಳೆಯರಿಗೂ ಸಹ ಮೆಹೆಂದಿಯನ್ನು ಹಾಕಿಕೊಳ್ಳುವುದು ಎಂದರೆ ಏನೋ ಒಂಥರಾ ಸಡಗರ. ಅದರಲ್ಲೂ ಮದುವೆ ಮನೆಗಳಲ್ಲಿ ಅಥವಾ ಯಾವುದಾದರೂ ಹಬ್ಬ ಹರಿದಿನಗಳಲ್ಲಿ ಈ ಮೆಹೆಂದಿಯನ್ನ ಹಾಕಿಸಿಕೊಂಡು ಸಂಭ್ರಮಿಸುವುದನ್ನು ನಾವು ನೋಡಿರ್ತಿವಿ.

ಇತ್ತೀಚಿನ ದಿನಗಳಲ್ಲಿ ಮದುವೆಗೆ ಮೊದಲು ಮೆಹೆಂದಿ ಶಾಸ್ತ್ರ ಈಗ ಕಾಮನ್ ಆಗಿದೆ. ಕೆಲವರಿಗೆ ಮೆಹೆಂದಿ ಹಾಕೋ ಆಸೆ ಇರುತ್ತದೆ ಆದ್ರೆ ಇನ್ನು ಕೆಲವರಿಗೆ ಅದು ಬಹಳ ದಿನಗಳವರೆಗೆ ಉಳಿಯುತ್ತದೆ ಎನ್ನುವ ಕೊರಗು ಇರುತ್ತದೆ ಅಂತಹವರಿಗಾಗಿ ನಾವು ಕೈಗೆ ಹಾರಿರುವ ಮೆಹೆಂದಿಯನ್ನು ಸುಲಭವಾಗಿ ತೆಗೆಯುವ ಸಲಹೆಯನ್ನು ಕೊಡ್ತಿವಿ
 
*ಮೆಹೆಂದಿ ಹಚ್ಚಿರುವ ಕೈಗೆ ಆಲೂಗಡ್ಡೆ ರಸವನ್ನು ಹಚ್ಚಿ ಅದು ಒಣಗುವ ತನರ ಕಾಯಿರಿ ತದನಂತರ ಉಗುರು ಬೆಚ್ಚಗಿನ ನೀರಲ್ಲಿ ಕೈಯನ್ನು ತೊಳೆದುಕೊಳ್ಳಿ ಹೀಗೆ ಮಾಡುವ ಮೂಲಕ ಕ್ರಮೇಣ ನಿಮ್ಮ ಮೆಹೆಂದಿಯ ಬಣ್ಣ ಕಡಿಮೆಯಾಗುತ್ತದೆ.
 
*ಒಂದು ಪಾತ್ರೆಯಲ್ಲಿ ಆಲಿವ್ ಎಣ್ಣೆಯನ್ನು ಹಾಕಿ 10 ನಿಮಿಷ ಆ ಪಾತ್ರೆಯಲ್ಲಿ ಕೈಯನ್ನು ಅದ್ದಿ ನಂತರ ಅದ್ದಿರುವ ಕೈಯನ್ನು ಸಾಬುನು ಬಳಸಿ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ
 
*ನೀರು ಮತ್ತು ಸ್ವಲ್ಪ ಕ್ಲೋರಿನ್ ಅನ್ನು ಮಿಶ್ರಣ ಮಾಡಿಕೊಳ್ಳಿ ಅದರಲ್ಲಿ ಮೆಹೆಂದಿ ಹಾಕಿರುವ ಕೈಯನ್ನು 5 ನಿಮಿಷಗಳ ಕಾಲ ಅದ್ದಿ ತದನಂತರ ತಣ್ಣೀರಿನಲ್ಲಿ ಚೆನ್ನಾಗಿ ಕೈ ತೊಳೆದುಕೊಳ್ಳಿ
 
*ಒಂದು ಬಟ್ಟಲಿನಲ್ಲಿ 3 ಚಮಚ ಅಡಿಗೆ ಸೋಡಾ ಹಾಗೂ ಲಿಂಬೆಯ ರಸವನ್ನು ಮಿಶ್ರಣ ಮಾಡಿ ಅದನ್ನು ಕೈಗೆ ಉಚ್ಚಿಕೊಳ್ಳಿ ನಂತರ ಉಗುರು ಬೆಚ್ಚಗಿನ ನೀರಿನಿಂದ ಕೈ ತೊಳೆಯಿರಿ
 
ಕೆಲವರ ಚರ್ಮವು ತುಂಬಾ ಸುಕ್ಷ್ಮವಾಗಿರುತ್ತದೆ ಹಾಗಾಗಿ ಇವೆಲ್ಲವನ್ನೂ ಬಳಿಕೆ ಮಾಡುವ ಮುನ್ನ ನಿಮ್ಮ ಚರ್ಮಕ್ಕೆ ಇವೆಲ್ಲಾ ಅಂಶಗಳು ಯಾವುದೇ ಒಗ್ಗುತ್ತವೆಯೇ ಇಲ್ಲವೇ ಎಂಬುದನ್ನು ವೈದ್ಯರಿಂದ ಖಚಿತಪಡಿಸಿಕೊಂಡು ನಂತರ ಪ್ರಯತ್ನಿಸುವುದು ಒಳಿತು.ಇದರಲ್ಲಿ ಇನ್ನಷ್ಟು ಓದಿ :  

ಮಾದಕ ಸೌಂದರ್ಯ ಟಿಪ್ಸ್‌

news

ಮನೆಯಲ್ಲಿಯೇ ತಯಾರಿಸಿ ಕಾಜಲ್ ಮತ್ತು ಲಿಪ್‌ಬಾಮ್..!!

ಕಾಜಲ್ ಅಥವಾ ಕಾಡಿಗೆಯನ್ನು ಸಾಮಾನ್ಯವಾಗಿ ಪ್ರಪಂಚದಾದ್ಯಂತ ಬಳಸಲಾಗುತ್ತದೆ. ಕೇವಲ ಕಣ್ಣುಗಳನ್ನು ...

news

ಪುರುಷರಿಗಾಗಿ ಕೆಲವು ಸೌಂದರ್ಯದ ಟಿಪ್ಸ್...

ಇಂದಿನ ದಿನಗಳಲ್ಲಿ ಪೂರಷರೂ ಸಹ ಮಹಿಳೆಯರಷ್ಟೇ ಸೌಂದರ್ಯ ಪ್ರಜ್ಞೆಯನ್ನು ಹೊಂದಿದ್ದಾರೆ. ಅವರಿಗಾಗೇ ಹಲವಾರು ...

news

ಕಾಲಿನ ಅಂದವನ್ನು ಹೆಚ್ಚಿಸಲು ಹೀಗೆ ಮಾಡಿ

ಸೌಂದರ್ಯದ ಬಗ್ಗೆ ಕಾಳಜಿ ವಹಿಸುವ ಅನೇಕ ಮಹಿಳೆಯರು ತಮ್ಮ ಕೂದಲು, ಮುಖ, ಕೈಗಳ ಸೌಂದರ್ಯಕ್ಕಷ್ಟೇ ಹೆಚ್ಚು ...

news

ನೀವು ಉಗುರುಗಳಿಗೆ ಹಚ್ಚಿದ ಬಣ್ಣಗಳು ತುಂಬಾದಿನ ಚೆನ್ನಾಗಿರಲು ಹೀಗೆ ಮಾಡಿ..

ಈ ದಿನಗಳಲ್ಲಿ ಎಲ್ಲ ಮಹಿಳೆಯರೂ ಅಂದವಾಗಿ ಕಾಣಲು ಉಗುರುಗಳಿಗೆ ಬಣ್ಣವನ್ನು ಹಚ್ಚಿಕೊಳ್ಳುತ್ತಾರೆ. ಆದರೆ ...