ಹೆಂಗಳೆಯರ ಪರಮ ಶತ್ರು ಎಂದರೆ ಮೊಡವೆಗಳು ಎಂದು ಹೇಳಬಹುದು. ಅವುಗಳಿಂದ ಸೌಂದರ್ಯವು ಕಳೆಗುಂದುತ್ತವೆ. ಅವುಗಳಿಗೆ ರಾಸಾಯನಿಕವಾದ ಪೌಡರ್ಗಳು, ತೈಲಗಳನ್ನು ಹಚ್ಚಿ ಕಲೆಗಳು ಉಂಟಾಗುವಂತೆ ಮಾಡುವುದಕ್ಕಿಂತ ಮನೆಯಲ್ಲಿಯೇ ಸಿಗುವ ನೈಸರ್ಗಿಕ ವಸ್ತುಗಳನ್ನು ಹಚ್ಚುವುದರಿಂದ ಮುಖದಲ್ಲಿ ಆಗುವ ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳುವದಲ್ಲದೇ ಅದರಿಂದ ಉಂಟಾಗುವ ಕಲೆಗಳಿಂದಲೂ ಮುಕ್ತಿಯನ್ನು ಪಡೆದುಕೊಳ್ಳಬಹುದು.