ಇತ್ತೀಚಿನ ದಿನಗಳಲ್ಲಿ ಸೊಂಪಾದ ಕಾಂತಿಯುತ ಗುಂಗುರು ಕೂದಲನ್ನು ಹೊಂದಬೇಕು ಎಂದು ಕೆಲವರು ಬಯಸುತ್ತಾರೆ. ಏಕೆಂದರೆ ಆಧುನಿಕ ಕಾಲದಲ್ಲಿ ಹಲವು ರೀತಿಯ ಕೇಶರಾಶಿಗಳ ನಡುವೆ ಈ ಗುಂಗುರು ಕೂದಲಿನ ಕೇಶರಾಶಿ ತನ್ನದೇ ವೈಶಿಷ್ಟ ಆಕರ್ಷಣೆಯನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಇಂದಿನ ದಿನಗಳಲ್ಲಿ ಕೆಲವರು ತಮ್ಮ ಕೂದಲನ್ನು ಗುಂಗುರಾಗಿ ಪರಿವರ್ತಿಸಿಕೊಳ್ಳುವುದು ಮತ್ತು ಅದಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸುವುದನ್ನು ನಾವು ಕಾಣಬಹುದು. ಆಧುನಿಕ ಉಪಕರಣಗಳನ್ನು ಬಳಸಿ ಕೆಲವರು ತಮ್ಮ ಕೂದಲನ್ನು ಗುಂಗರಾಗಿಸಿಕೊಳ್ಳುತ್ತಾರೆ ಅದರಿಂದ ಮುಂದೆ