ಕೂದಲ ಸೀಳು, ವಿಪರೀತ ಕೂದಲು ಉದುರುವಿಕೆಯು ವಿಶೇಷವಾಗಿ ಮಹಿಳೆಯರಲ್ಲಿ ಹೆಚ್ಚು ಆತಂಕವನ್ನು ಉಂಟುಮಾಡುತ್ತದೆ. ದಟ್ಟವಾದ, ಉದ್ದನೆಯ ಕೂದಲು ಮಹಿಳೆಯರಿಗೆ ಸೌಂದರ್ಯದ ಪ್ರತೀಕ ಎಂದೇ ಹೇಳುತ್ತಾರೆ. ಆದರೆ ಅದಕ್ಕೇ ತೊಂದರೆಯುಂಟಾದಾಗ ಮಹಿಳೆಯರು ಚಿಂತೆಗೀಡಾಗುತ್ತಾರೆ. ನಿಮ್ಮ ಕೂದಲ ಉತ್ತಮ ಬೆಳವಣಿಗೆಗೆ ಮತ್ತು ಕೂದಲು ಉದುರುವಿಕೆಯನ್ನು ನಿಲ್ಲಿಸಲು ಉತ್ತಮವಾದ ಕೆಲವು ನೈಸರ್ಗಿಕ ಹಾಗೂ ಮನೆ ಮದ್ದುಗಳು ಇಲ್ಲಿವೆ. 1. ಮೊಟ್ಟೆಯ ಮಾಸ್ಕ್ - ಮೊಟ್ಟೆಗಳಲ್ಲಿ ಸಲ್ಫರ್, ಫಾಸ್ಫರಸ್, ಸೆಲೆನಿಯಮ್, ಅಯೋಡಿನ್, ಸತು ಮತ್ತು