ಮಿಸ್ಟರ್ ಇಂಡಿಯಾ ಸ್ಪರ್ಧೆಗೆ ದಕ್ಷಿಣ ಭಾರತದಿಂದ ಐವರು ಯುವ ಮಾಡೆಲ್ ಗಳು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಝೋನ್ ದಿ ಪಾರ್ಕ್ ಹೋಟೆಲ್ ನಲ್ಲಿ ನಡೆದ ಮ್ಯಾನ್ ಹಂಟ್ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಭಾರತದ ಹೈದರಾಬಾದ್, ಬೆಂಗಳೂರು, ಕೊಚ್ಚಿ, ಚೆನೈನಿಂದ ಆಗಮಿಸಿದ್ದ ಪುರುಷ ಮಾಡೆಲ್ ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅಭಿನಿತ್ ಸಿನ್ಹ, ಪ್ರಸಾದ್ ಕಾರ್ಯಪ್ಪ, ಆರ್. ಅರ್ಜುನ್, ನಿತೇಶ್ ಗರ್ಗ್, ಪುನೀತ್ ಅಗರವಾಲ್ ರಾಷ್ಟ್ರೀಯ ಮಟ್ಟದ ಮ್ಯಾನ್ ಹಂಟ್ಗೆ ಆಯ್ಕೆಯಾಗಿದ್ದಾರೆ.