ಎಣ್ಣೆ ಚರ್ಮ ಮತ್ತು ಮೊಡವೆಗಳನ್ನು ನಿರ್ವಹಿಸುವುದು ಸುಲಭದ ವಿಷಯವಲ್ಲ. ಇದಕ್ಕೆ ಹಲವಾರು ಕಾರಣಗಳಿವೆ ಉದಾಹರಣೆಗೆ ವಾತಾವರಣದಲ್ಲಾಗುವ ಬದಲಾವಣೆ, ಒತ್ತಡ, ಡಯೆಟ್, ಹಾರ್ಮೋನ್ನಲ್ಲಾಗುವ ಬದಲಾವಣೆ ಮತ್ತು ಚರ್ಮದ ಆರೈಕೆ ಮಾಡದೇ ಇರುವುದು. ಎಣ್ಣೆ ಚರ್ಮಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಹೊಂದಿರುವ ಉತ್ಪನ್ನಗಳನ್ನು ಬಳಸುವ ಬದಲು ಮನೆಯಲ್ಲಿಯೇ ಇರುವ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿ ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಮಾಡಿಕೊಳ್ಳಬಹುದು.