ಮುಂಬೈ:ಮೇಕಪ್ ವಿಷಯಕ್ಕೆ ಬಂದಾಗ ಮಹಿಳೆಯರು ಹೆಚ್ಚು ಜಾಗರೂಕತೆಯನ್ನು, ಆಸಕ್ತಿಯನ್ನು ಹೊಂದಿರುತ್ತಾರೆ. ಅದರಲ್ಲೂ ಕಣ್ಣಿನ ಮೇಕಪ್ ವಿಷಯಕ್ಕೆ ಬಂದಾಗ ಇನ್ನಷ್ಟು ಮುತುವರ್ಜಿಯಿಂದ ಅಲಂಕರಿಸಿಕೊಳ್ಳುವುದು ಸ್ವಾಭಾವಿಕ. ಇಂತಹ ಒಂದು ವಿಶೇಷವಾದ ಹಾಗೂ ಬೇಸಿಗೆಯಲ್ಲಿ ಮಾಡಿಕೊಳ್ಳಬಹುದಾದ ಯಲ್ಲೋ ಐ ಶಾಡೋ ಮೇಕಪ್ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಕಣ್ಣಿನ ಮೇಕಪ್ ವಿಷಯಕ್ಕೆ ಬಂದಾಗ ಯಲ್ಲೋ ಐ ಶಾಡೋ ತುಂಬಾ ಪ್ರಯೋಗಾತ್ಮಕವಾಗಿ ಹಾಗೂ ಇಂಟರೆಸ್ಟಿಂಗ್ ಆಗಿ ಕಾಣುತ್ತದೆ. ಇದೇನಿದು ಯಲ್ಲೋ ಐ ಶಾಡೋನಾ... ಕ್ರೇಜಿ.. ಅಂದ್ಕೊಬೇಡಿ.