ಕಾಫಿ ಕುಡಿಯಲು ಮಾತ್ರವಲ್ಲ, ತ್ವಚೆಯನ್ನು ಪೋಷಿಸಿ ಸೌಂದರ್ಯವನ್ನು ಹೆಚ್ಚಿಸಲು ಸಹ ಬಳಸಲಾಗುತ್ತದೆ. ಕಾಫಿ ಪುಡಿ ಬಳಕೆಯಿಂದ ಮುಖಕ್ಕೆ, ದೇಹದ ಚರ್ಮಕ್ಕೆ ಮತ್ತು ಕೂದಲಿಗೆ ಅಗತ್ಯ ಪೋಷಣೆ ನೀಡುತ್ತದೆ. ವಾಸ್ತವವಾಗಿ ಕಾಫಿಯ ಕೆಫೀನ್ ದೇಹದೊಳಕ್ಕೆ ಮಾಡುವ ಉಪಕಾರಕ್ಕಿಂತಲೂ ದೇಹದ ಹೊರಗಿನಿಂದ ನೀಡುವ ಪೋಷಣೆಯೇ ಹೆಚ್ಚು ಉಪಯುಕ್ತವಾಗಿದೆ. ಹೌದು ನಿಮ್ಮ ತ್ವಚೆ ಮತ್ತು ಕೂದಲಿಗೂ ಕಾಫಿ ಹೆಚ್ಚು ಒಳ್ಳೆಯದು. ಕಾಫಿಯಲ್ಲಿರುವ ಕೆಫಿನ್ ಅಂಶವು ತ್ವಚೆ ಮತ್ತು ಕೂದಲನ್ನು ರಿಪೇರಿ ಮಾಡಲು ಸಹಾಯ ಮಾಡುತ್ತದೆ.