ನಮ್ಮ ಪೂರ್ವಜರು ಆರೋಗ್ಯಕ್ಕೆ, ಸೌಂದರ್ಯಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿದ್ದರು. ಮನೆಮದ್ದುಗಳಲ್ಲಿ, ಗಿಡಮೂಲಿಕೆಗಳ ಬಳಕೆಯಲ್ಲಿ ಎತ್ತಿದ ಕೈ. ಆದರೆ ಈಗಿನ ವಿದ್ಯಮಾನದಲ್ಲಿ ವಾತಾವರಣದಲ್ಲಾಗುವ ಕಲುಷಿತಗಳಿಂದ, ಹವಾಮಾನ ವೈಪರೀತ್ಯಗಳಿಂದಲೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲೇ ಸರಿ. ಅದರಲ್ಲಿಯೂ ಈ ಆಧುನಿಕ ಯುಗದಲ್ಲಿ ಹೆಣ್ಣು ಸ್ವಾವಲಂಬಿಯಾಗಿ ತನ್ನ ದುಡಿತವನ್ನು ಪ್ರಾರಂಭಿಸಿದಾಗಿನಿಂದ ಹೊರಗಿನ ಧೂಳು, ವಾಹನದ ಹೊಗೆ, ಸೆಖೆ, ಬೆವರಿನಿಂದ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟಕರ. ಅದರಲ್ಲಿಯೂ ಇತ್ತೀಚೆಗೆ ನಾನಾ ವಿಧದ