ಬೆಂಗಳೂರು: ಆಹಾರಕ್ಕೂ ನಮ್ಮ ಸೌಂದರ್ಯಕ್ಕೂ ಬಿಡಲಾರದ ನಂಟು. ಸುಂದರ ತ್ವಚೆ ಬೇಕೆಂದರೆ ನಾವು ತಿನ್ನುವ ಆಹಾರವೂ ಆರೋಗ್ಯಕರವಾಗಿರಬೇಕು. ಯಾವೆಲ್ಲಾ ಆಹಾರ ವಸ್ತುಗಳು ನಮ್ಮ ಚರ್ಮವನ್ನು ಕುಲಗೆಡಿಸುತ್ತವೆ ನೋಡೋಣ. ಉಪ್ಪು ಉಪ್ಪಿಗಿಂತ ಬೇರೆ ರುಚಿ ಇಲ್ಲ ಎಂಬುದೇನೋ ಸತ್ಯ. ಆದರೆ ಉಪ್ಪು ಜಾಸ್ತಿ ತಿನ್ನುವುದರಿಂದ ನಮ್ಮ ಮುಖದ ತ್ವಚೆ ಜೋತು ಬಿದ್ದಂತಾಗಬಹುದು. ಪ್ರತಿದಿನ 500 ಮಿ. ಗ್ರಾಂಗಿಂತ ಹೆಚ್ಚು ಉಪ್ಪು ತಿನ್ನಬೇಡಿ.ಡೈರಿ ಉತ್ಪನ್ನಗಳು ಹಾಲಿನ ಉತ್ಪನ್ನಗಳು ಫೇಸ್ ಪ್ಯಾಕ್ ಮಾಡಿಕೊಳ್ಳುವುದಕ್ಕೆ