ಬೆಂಗಳೂರು: ಇದು ಹೇಳಿ ಕೇಳಿ ಮಾವಿನ ಹಣ್ಣಿನ ಸೀಸನ್. ಮಾರುಕಟ್ಟೆಗೆ ಹೋದರೆ ಕಣ್ಣಿಗೆ ಕಾಣಿಸುವುದೇ ಮಾವು. ಆದರೆ ಮಾವಿನ ಹಣ್ಣು ತಿಂದರೆ ದಪ್ಪಗಾಗುತ್ತಾರೆ ಎಂದು ಕೆಲವರು ಅಂದುಕೊಳ್ಳುತ್ತಾರೆ. ಇದೆಷ್ಟು ಸರಿ? ತಜ್ಞರು ಹೇಳುವ ಪ್ರಕಾರ ಇದು ತಪ್ಪು ಕಲ್ಪನೆ. ಮಾವಿನ ಹಣ್ಣು, ಕೊಲೆಸ್ಟ್ರಾಲ್, ಉಪ್ಪು, ಕೊಬ್ಬು ರಹಿತವಾದ ಹಣ್ಣು. ಅದನ್ನು ಸೇವಿಸುವುದರಿಂದ ಸೌಂದರ್ಯಕ್ಕೆ ಯಾವ ಹಾನಿಯೂ ಆಗಲ್ಲ.ಅತಿಯಾದರೆ ಅಮೃತವೂ ವಿಷವಂತೆ. ಹಾಗೆಯೇ ಮಾವಿನ ಹಣ್ಣನ್ನೂ ಅಗತ್ಯಕ್ಕಿಂತ ಹೆಚ್ಚು ತಿಂದರೆ