PTI ಮೂವತ್ತು ಕಳೆಯಿತೆಂದರೆ ಮಹಿಳೆಯರಿಗೆ ಸೊಂಟದ ಸುತ್ತಳತೆ ಹೆಚ್ಚುತ್ತದೆ. ಮುಖದ ರೂಪ ಬದಲುತ್ತದೆ. ಆಕೃತಿಯಲ್ಲಿ ಏರುಪೇರಾಗುತ್ತದೆ. ಆದರೆ, ಒಂದಷ್ಟು ಕಾಳಜಿ ವಹಿಸಿದರೆ, 48ರ ಹರೆಯದಲ್ಲೂ 28ರಂತೆ ಕಾಣಬಹುದು. ಮೊದಲನೆಯದಾಗಿ ದೇಹ ಹಾಗೂ ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳುವುದು. ಆರೋಗ್ಯಕರ ಚಟುವಟಿಕೆಗಳು, ಸಣ್ಣಪುಟ್ಟ ವ್ಯಾಯಾಮ ಮತ್ತು ಸೂಕ್ತ ಸಮಯಕ್ಕೆ ಸರಿಯಾಗಿ ಸಮತೂಕದ ಆಹಾರ ಸೇವನೆ- ಇಷ್ಟನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಅರ್ಧ ಸಮಸ್ಯೆ ಬಗೆಹರಿದಂತೆ.ಮಾನಸಿಕ ಒತ್ತಡ ಹಾಗೂ ವಿಷಣ್ಣತೆಗಳು ಬಳಿಗೆ ಸುಳಿಯದಂತೆ ಜಾಗೃತೆ ವಹಿಸಬೇಕು. ಮುಖವು