ND ಬೆಳಗ್ಗೆ ಏಳುವ ಮೊದಲೇ ಕುಡಿಯುವ ಕಾಫಿಗೆ ಬೆಡ್ ಕಾಫಿ ಎಂಬ ಆಪ್ಯಾಯಮಾನ ಹೆಸರಿನೊಂದಿಗೆ, ಕಾಫಿ ಎಂಬುದು ಜನ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂಬುದು ವೇದ್ಯವಾಗುತ್ತದೆ. ಬೆಳಗ್ಗೆ ಅಥವಾ ಸಂಜೆಯ ಉಪಾಹಾರ ಸೇವನೆಗೆ ಹೋಗಬೇಕಿದ್ದರೆ, ಕಾಫಿಗೆ ಹೋಗೋಣ ಅಂತಲೇ ಹೇಳುವ ಪರಿಪಾಠವೂ ಇದೆ.ನಮ್ಮನ್ನು ಹಾಸಿಗೆಯಿಂದ ಎಬ್ಬಿಸುವ ಈ ಕಾಫಿಯು ಕ್ಯಾನ್ಸರ್ ಸಾಧ್ಯತೆಯ ಪ್ರಮಾಣವನ್ನು ತಗ್ಗಿಸುತ್ತದೆ ಎಂಬ ಬಗ್ಗೆ ಈಗಾಗಲೇ ವೈದ್ಯಕೀಯ ಜಗತ್ತಿನ ಸಂಶೋಧನೆಯೊಂದು ವರದಿ ಮಾಡಿದೆ. ಇದೇ ರೀತಿ ಆರೋಗ್ಯದ ಮೇಲೆ