ದೇಹ ಆರೋಗ್ಯದಲ್ಲಿ ಚರ್ಮದ ಬಣ್ಣ, ಗುಣ, ಕಾಂತಿ ಇತ್ಯಾದಿಗಳು ಗಮನಾರ್ಹವಾಗಿವೆ. ಸುಕ್ಕುಗಟ್ಟಿದ, ಕಪ್ಪು ದಬ್ಬೆಗಳೆದ್ದು, ಸುಣುಗು (ಹೊಟ್ಟು) ಏಳುವ ಚರ್ಮ ಹೊಂದಿದ ವ್ಯಕ್ತಿಯು ಅನಾರೋಗ್ಯಪೀಡಿತನಂತೆ ತೋರುತ್ತಾನೆ.ಮಹಿಳೆಯರಂತೂ ಚರ್ಮದ ಸಂರಕ್ಷಣೆ, ನಿರ್ವಹಣೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಚೈತನ್ಯದಿಂದ ಕೂಡಿದ ಚರ್ಮ ಯೌವನದ ಲಕ್ಷಣ. ಪ್ರಾಯ ಎಷ್ಟೇ ಆಗಿರಬಹುದು ಚರ್ಮದಲ್ಲಿ ಸುಕ್ಕು ಬಿದ್ದಿಲ್ಲವಾದರೆ ಇನ್ನು ಕಿರಿಯವರಾಗಿ ಕಾಣಿಸಿಕೊಳ್ಳಬಹುದು. ಹವಾಮಾನಕ್ಕೆ ತಕ್ಕಂತೆ ಚರ್ಮದ ರಕ್ಷಣೆ, ಶುಚೀಕರಣ, ಇನ್ನಿತರ ವಿಷಯಗಳು ಮಹತ್ವದ್ದಾಗಿರುತ್ತವೆ.ಮೆದುವಾಗಿರುವ ಶುಭ್ರ ಚರ್ಮ, ಅದರಲ್ಲಿ