ಒಂದು ಟೇಬಲ್ ಚಮಚ ಹಾಲಿನ ಕೆನೆಗೆ ಅರ್ಧ ಟೀ ಚಮಚ ಸಣ್ಣ ಬಾಂಬೆ ರವೆಯನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಒಣಗಿದ ನಂತರ ಬೆರಳ ತುದಿಯಿಂದ ಮಸಾಜ್ ಮಾಡಿ ಮುಖ ತೊಳೆಯಿರಿ. ತ್ವಚೆ ಲಕಲಕನೆ ಹೊಳೆಯಲಾರಂಭಿಸುತ್ತದೆ. ಹೊಟ್ಟು ಉದುರಿ ತ್ವಚೆ ಬೆಳ್ಳಗಾಗುತ್ತದೆ.