ಟೊಮ್ಯಾಟೋ, ನಿಂಬೆ, ದ್ರಾಕ್ಷಿ, ಕಿತ್ತಳೆ ಮುಂತಾದ ಹಣ್ಣುಗಳ ರಸ ಮುಖಕ್ಕೆ ತುಂಬಾ ಒಳ್ಳೆಯದು. ಈ ಹಣ್ಣುಗಳಲ್ಲಿರುವ ಸಿಟ್ರಿಕ್ ಆಸಿಡ್ ಮುಖದ ಚರ್ಮಕ್ಕೆ ಇತರ ಯಾವುದೇ ಕ್ರೀಮುಗಳಿಗಿಂತ ತುಂಬಾ ಉತ್ತಮ. ಈ ಹಣ್ಣುಗಳ ರಸಕ್ಕೆ ಜೇನುತುಪ್ಪ ಸ್ವಲ್ಪ ಸೇರಿಸಿ ಮುಖಕ್ಕೆ ಹಚ್ಚುತ್ತಾ ಬಂದಲ್ಲಿ ಮೊಡವೆ, ಕಪ್ಪು ಕಲೆ ತೊಡೆದುಹಾಕಿ ಹೊಸ ಹೊಳಪು ನೀಡುತ್ತದೆ.