ಸೌಂದರ್ಯ ಚಿಕಿತ್ಸೆ ಸಂದರ್ಭ ತೀಕ್ಷ್ಣ ರಾಸಾಯನಿಕಗಳು, ಬ್ಲೀಚ್ ಬಳಕೆ ಸಲ್ಲದು. ಅವುಗಳು ತತ್ ಕ್ಷಣಕ್ಕೆ ಮುಖಕ್ಕೆ ಕಾಂತಿಯನ್ನು ನೀಡುತ್ತವೆಯಾದರೂ, ಕೆಲವು ವರ್ಷಗಳ ಬಳಿಕ ಮುಖದ ಚರ್ಮದ ವಿನ್ಯಾಸವು ಕಪ್ಪುಕಟ್ಟಬಹುದು ಮತ್ತು ಚರ್ಮ ಸುಕ್ಕುಗಟ್ಟಬಹುದು. ಯಾವತ್ತೂ ಗಿಡಮೂಲಿಕೆಗಳ ಸೌಂದರ್ಯ ಚಿಕಿತ್ಸೆ ಅಥವಾ ಗೃಹೋತ್ಪನ್ನಗಳಿಗೆ ಮೊರೆ ಹೋಗುವುದು ಯಾವತ್ತೂ ಒಳಿತು.