ವಯಸ್ಸಾಗುತ್ತಿದ್ದಂತೆ ಕಳೆಗುಂದಿದ ಮುಖದ ಕಾಂತಿ ಹೆಚ್ಚಿಸಬೇಕಾ?ಹಾಗಾದ್ರೆ 3 ದಿನ ಈ 3 ವಿಧಾನ ಅನುಸರಿಸಿದರೆ ಸಾಕು

ಬೆಂಗಳೂರು, ಬುಧವಾರ, 8 ಮೇ 2019 (09:28 IST)

ಬೆಂಗಳೂರು : ವಯಸ್ಸಾಗುತ್ತಿದ್ದಂತೆಯೇ ಮುಖದ ಕಾಂತಿ ಕಡಿಮೆಯಾಗುತ್ತದೆ. ಅದಕ್ಕಾಗಿ ಚಿಂತಿಸುವ ಬದಲು ಮನೆಯಲ್ಲೇ 3 ದಿನ ಈ ರೀತಿ ಮಾಡಿ ತ್ವಚೆ ಕಾಂತಿ ಹೆಚ್ಚಿಸಿಕೊಳ್ಳಿ.
ಮೊದಲನೇಯ ದಿನದಂದು ಬಾಳೆಹಣ್ಣನ್ನು ಕೈಯಿಂದ ಹಿಸುಕಿ ಪೇಸ್ಟ್‌ ರೀತಿ ಮಾಡಿ ಅದಕ್ಕೆ 1 ಚಮಚ ಹಸಿ ಹಾಲು ಹಾಕಿ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ.


ಎರಡನೇಯ ದಿನದಂದು ಅರ್ಧ ಗ್ಲಾಸ್‌ ಅಕ್ಕಿಯನ್ನು ನೀರಿಗೆ ನೆನೆ ಹಾಕಿ ಅರ್ಧ ಗಂಟೆಯ ಬಳಿಕ ಆ ನೀರಿನಿಂದ ಮುಖ ತೊಳೆಯಿರಿ, ಆ ನೀರು ಮುಖದಲ್ಲಿ ಹಾಗೇ ಒಣಗಲಿ. ಅರ್ಧ ಗಂಟೆಯ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಮೂರನೇಯ ದಿನದಂದು ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು ಅದರ ಸಿಪ್ಪೆ ಸುಲಿದು ತುರಿಯಿರಿ. ಈಗ ಇದಕ್ಕೆ ಅರ್ಧ ದಾಳಿಂಬೆಯ ಬೀಜಗಳನ್ನು ಹಾಕಿ 1 ಚಮಚ ನೀರು ಹಾಕಿ ಗ್ರೈಂಡ್‌ ಮಾಡಿ, ನಂತರ 1 ಚಮಚ ನಿಂಬೆ ಸರ ಸೇರಿಸಿ. ನಂತರ ಇವುಗಳನ್ನು ಐಸ್ ಕ್ಯೂಬ್‌ ಟ್ರೇಗೆ ಹಾಕಿ ಫ್ರೀಜರ್‌ನಲ್ಲಿ ಇಡಿ. ದಿನಾ ಒಂದೊಂದು ಐಸ್ ಕ್ಯೂಬ್‌ ತೆಗೆದು 5 ನಿಮಿಷ ಮಸಾಜ್‌ ಮಾಡಿ ನಂತರ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 
 
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೊಳ್ಳೆಗಳನ್ನು ಸಾಯಿಸಲು ಬಳಸುವ ಸೊಳ್ಳೆ ಬ್ಯಾಟ್ ಮಕ್ಕಳ ಜೀವಕ್ಕೆ ಅಪಾಯಕಾರಿ

ಬೆಂಗಳೂರು : ಇತ್ತೀಚೆಗೆ ಸೊಳ್ಳೆಗಳ ಹಾವಳಿ ಹೆಚ್ಚಾಗಿರುವುದರಿಂದ ಸೊಳ್ಳೆ ಹೋಗಲಾಡಿಸಲು ಬ್ಯಾಟ್ ಗಳನ್ನು ...

news

ಒಂದು ವರ್ಷ ಮಕ್ಕಳು ಬೇಡ ಎನ್ನುವವರು ಈ ರಿಂಗ್ ನ್ನು ಬಳಸಿ

ಬೆಂಗಳೂರು : ಬೇಡವಾದ ಗರ್ಭಧಾರಣೆ ತಡೆಗಟ್ಟುವುದಕ್ಕೆ ಹಲವು ವಿಧಾನಗಳನ್ನು ಕಂಡುಹಿಡಿಯಲಾಗಿದೆ. ಅದೇರೀತಿ ಈಗ ...

news

ದಿನನಿತ್ಯ ಮಾಡುವ ಕೆಲಸದಿಂದ ಕೈಗಳ ಕೋಮಲತೆ ಹಾಳಾಗುತ್ತಿದೇಯಾ? ಹಾಗಾದ್ರೆ ಹೀಗೆ ಮಾಡಿ

ಬೆಂಗಳೂರು : ಕೈಗಳು ಕೋಮಲವಾಗಿದ್ದರೆ ಅವುಗಳ ಅಂದ ಹೆಚ್ಚಾಗುತ್ತದೆ. ಆದರೆ ಪ್ರತಿದಿನ ಮಾಡುವ ಕೆಲಸದಿಂದ ...

news

ಬೇಗ ಮುಟ್ಟಾಗಲು ಇವುಗಳನ್ನು ಸೇವಿಸಿ

ಬೆಂಗಳೂರು : ಹೆಣ್ಣುಮಕ್ಕಳಿಗೂ ಪ್ರತಿ ತಿಂಗಳು ಮುಟ್ಟಾಗುತ್ತದೆ. ಆದರೆ ಈ ಮುಟ್ಟಿನಿಂದ ಸಮಾರಂಭಗಳಿಗೆ ಹೋಗಲು ...