ಬೆಂಗಳೂರು : ಇನ್ಗ್ರೋನ್ ಟೋನೇಲ್ ಎಂದರೆ ಕಾಲು ಬೆರಳಿನ ಉಗುರು ತನ್ನ ಅಕ್ಕ ಪಕ್ಕಗಳಲ್ಲಿನ ತ್ವಚೆಯನ್ನು ಸೀಳಿಕೊಂಡು ಬೆಳೆಯುವ ಸ್ಥಿತಿಯಾಗಿರುತ್ತದೆ. ಇದನ್ನು ಆನಿಕೊಕ್ರಿಪ್ಟೊಸಿಸ್ ಎಂದು ಸಹ ಕರೆಯುತ್ತಾರೆ. ಇದು ಸಾಮಾನ್ಯವಾಗಿ ನೋವನ್ನು ಉಂಟು ಮಾಡುವುದರ ಜೊತೆಗೆ ಊತವನ್ನು ಸಹ ಉಂಟು ಮಾಡುತ್ತದೆ. ಬಹುತೇಕ ಬಾರಿ ಈ ಸಮಸ್ಯೆಯಿಂದಾಗಿ ನಿಮ್ಮ ಹೆಬ್ಬೆರಳು ತೊಂದರೆಗೊಳಗಾಗುತ್ತದೆ.