ಮಳೆಗಾಲದಲ್ಲಿ ನಿಮ್ಮ ಕೂದಲಿಗೆ ವಿಶೇಷ ಕಾಳಜಿಯನ್ನು ತೋರಬೇಕಾಗುತ್ತದೆ. ಕೂದಲನ್ನು ಜಾಸ್ತಿ ಒದ್ದೆಯಾಗಲು ಬಿಡಬೇಡಿ. ಮಳೆನೀರಿನೊಂದಿಗೆ ಕಶ್ಮಲಗಳೂ ತಲೆಕೂದಲಿನೊಂದಿಗೆ ಸೇರಿ ಬುಡದಲ್ಲಿ ಹಾಗೆಯೇ ಉಳಿಯುತ್ತದೆ. ಹಾಗಾಗಿಯೇ ಮಳೆಯಲ್ಲಿ ನೆನೆದರೆ ತಲೆ ತುರಿಸಲು ಆರಂಭವಾಗುತ್ತದೆ. ಮಳೆಗಾಲದ ಸೂರ್ಯನ ಬಿಸಿಲು ಹಾಗೂ ಮಳೆಯ ಹನಿ ಇವುಗಳರಡೂ ಜತೆಯಾಗಿ ಕೂದಲನ್ನು ಹಾಳುಮಾಡುತ್ತದೆ. ಹಾಗಾಗಿ ಯಾವಾಗಲೂ ಮಳೆಗಾಲದಲ್ಲಿ ರೇನ್ ಕೋಟ್ ಅಥವಾ ಒಂದು ಉತ್ತಮ ಛತ್ರಿಯನ್ನು ಬಳಸಿ. ಮಳೆಯಿಂದ ಒದ್ದೆಯಾದ ಕೂದಲನ್ನು ಖಾರವಲ್ಲದ ಅಥವಾ ಸೌಮ್ಯವಾದ ಶಾಂಪೂವಿನಿಂದ