ಹೊಟ್ಟೆಯ ಬೊಜ್ಜು ಅಧಿಕ ಕೊಲೆಸ್ಟ್ರಾಲ್, ರಕ್ತದೊತ್ತಡ, ಮಧುಮೇಹ ಮತ್ತು ಹೃದಯದ ಕಾಯಿಲೆಗಳನ್ನು ಉಂಟು ಮಾಡಬಹುದು. ಹೊಟ್ಟೆಯ ಬೊಜ್ಜು ಕರಗಿಸಲು ಕ್ಯಾಲರಿ ಸೇವನೆ ಕಡಿಮೆ ಮಾಡಬೇಕು. ವ್ಯಾಯಾಮದೊಂದಿಗೆ ನಿತ್ಯವೂ ಸೇವನೆ ಮಾಡುವಂತಹ ಕ್ಯಾಲರಿ ಬಗ್ಗೆ ಗಮನಹರಿಸಿದರೆ ಅದರಿಂದ ಬೊಜ್ಜು ಕರಗಿಸಬಹುದು. ಪುರುಷರಾಗಲಿ, ಮಹಿಳೆಯರಾಗಲಿ ಹೊಟ್ಟೆಯಲ್ಲಿ ಬೊಜ್ಜು ಬಂದರೆ ಅದನ್ನು ಮತ್ತೆ ಕರಗಿಸುವುದು ತುಂಬಾ ಕಷ್ಟವಾಗುವುದು. ಹೊಟ್ಟೆಯ ಬೊಜ್ಜು ಹೊಂದಿರುವವರು ಅದನ್ನು ಕರಗಿಸಲು ನಿಯಮಿತ ವ್ಯಾಯಾಮ ಹಾಗೂ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗಬೇಕು.