ತೂಕ ಇಳಿಕೆಯಲ್ಲಿ ಯಶಸ್ವಿಯಾದವರು ಇದನ್ನು ಅಷ್ಟು ಸುಲಭವಾಗಿ ಏನೂ ಪಡೆದಿರುವುದಿಲ್ಲ, ಹಲವಾರು ದಿನಗಳ ಸತತ ಪರಿಶ್ರಮ ಹಾಗೂ ಕಟ್ಟುನಿಟ್ಟಿನ ವ್ಯಾಯಾಮ ಮತ್ತು ಆಹಾರಕ್ರಮವನ್ನು ಅನುಸರಿಸಿರುತ್ತಾರೆ. ಈ ವ್ಯಕ್ತಿಗಳು ತಾವು ಸೇವಿಸುವ ಆಹಾರದ ಕ್ಯಾಲೋರಿಗಳ ಬಗ್ಗೆ ಹೆಚ್ಚಿನ ಅಸ್ಥೆ ವಹಿಸಬೇಕಾಗುತ್ತದೆ. ದೇಹದ ಅನಗತ್ಯ ಕಲ್ಮಶಗಳು ನಿವಾರಣೆಯಾದರೆ, ತೂಕ ಇಳಿಕೆಯ ಪ್ರಯತ್ನಗಳು ಇನ್ನಷ್ಟು ಫಲಪ್ರದ ಹಾಗೂ ಶೀಘ್ರವಾಗಿ ನೆರವೇರಲಿವೆ. ದೇಹದ ಕಲ್ಮಶಗಳನ್ನು ನಿವಾರಿಸುವ (ಡಿಟಾಕ್ಸ್ ಡ್ರಿಂಕ್) ಪಾನೀಯ ಅಥವಾ ಪಾನಕಗಳಲ್ಲಿ ನಿಂಬೆರಸ ಮತ್ತು