ತ್ವಚೆಗೆ ಬಾಹ್ಯವಾಗಿ ಎಷ್ಟೇ ಕಾಳಜಿ ಮಾಡಿದರೂ, ದೇಹಕ್ಕೆ ಅಗತ್ಯ ಜೀವಸತ್ವಗಳ ಪೂರೈಕೆ ಆದಾಗ ಮಾತ್ರ ಫಲಿತಾಂಶ ಚೆನ್ನಾಗಿ ಬರಲು ಸಾಧ್ಯ. ಹೀಗಾಗಿಯೇ ಬೇಸಿಗೆಯಲ್ಲಿ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳು ಏನೆಲ್ಲ ಸೇವಿಸಬೇಕೆಂಬ ಮಾಹಿತಿ ಇಲ್ಲಿದೆ. ಸೌಂದರ್ಯವನ್ನು ಕಾಪಾಡಿಕೊಳ್ಳಲು ತ್ವಚೆಯ ಆರೈಕೆ ಮುಖ್ಯ. ಆಯಾ ಕಾಲಕ್ಕೆ ತಕ್ಕಂಯೆ ತ್ವಚೆಯ ಆರೈಕೆ ಮಾಡದಿದ್ದರೆ ಇಲ್ಲ ಸಲ್ಲದ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಬೇಸಿಗೆಯಲ್ಲಿ ಕೊಂಚ ಹೆಚ್ಚಾಗಿಯೇ ತ್ವಚೆಯ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಬಿಸಿಲಿನ ದಗೆಯಿಂದ ಚರ್ಮದ