ನಿಮ್ಮ ಚರ್ಮ ತೇವಾಂಶದಿಂದ ಕೂಡಿರಬೇಕೆಂದರೆ ಕ್ರೀಂಗಳ ಬದಲು ಈ ಮೂರನ್ನು ಬಳಸಿ

ಬೆಂಗಳೂರು, ಬುಧವಾರ, 27 ಮಾರ್ಚ್ 2019 (09:36 IST)

ಬೆಂಗಳೂರು : ಕೆಲವರ ಸ್ಕಿನ್ ತುಂಬಾ  ಡ್ರೈಯಾಗಿರುತ್ತದೆ. ಈ ತರಹದ  ಸ್ಕಿನ್ ಯಿಂದ ಮುಖದ ಅಂದ ಕೆಡುತ್ತದೆ. ಅದಕ್ಕಾಗಿ ನಿಮ್ಮ ಸ್ಕಿನ್ ಯಾವಾಗಲೂ ತೇವಾಂಶದಿಂದ ಕೂಡಿರಬೇಕೆಂದು ಮಾಯಿಶ್ಚರೈಸರ್ ಕ್ರೀಂಗಳನ್ನು ಹಚ್ಚುವ ಬದಲು ಪ್ರಕೃತ್ತಿದತ್ತವಾಗಿ ಸಿಗುವ ಈ ಮೂರನ್ನು ಹಚ್ಚಿ ನೋಡಿ.

ಜೇನುತುಪ್ಪ: ಇದು ಸುಲಭದಲ್ಲಿ ಸಿಗುವ ಮಾಯಿಶ್ಚರೈಸರ್‌ ಮಾತ್ರವಲ್ಲದೆ ಚರ್ಮದ ಕಪ್ಪು ಕಲೆಗಳನ್ನು, ಮೊಡವೆ, ಚರ್ಮದ ಸುಕ್ಕನ್ನು ನಿವಾರಿಸುತ್ತದೆ. 2 ಚಮಚ ಜೇನುತುಪ್ಪಕ್ಕೆ 4 ಚಮಚ ನೀರನ್ನು ಸೇರಿಸಿ ಮುಖಕ್ಕೆ ಲೇಪನ ಮಾಡಿ 15 ನಿಮಿಷಗಳ ನಂತರ ಬೆಚ್ಚನೆಯ ನೀರಿನಿಂದ ಮುಖವನ್ನು ತೊಳೆಯುವುದು. ಇದು ಮುಖಕ್ಕೆ ತೇವಾಂಶವನ್ನು ನೀಡುವುದಲ್ಲದೆ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ

 

ಕೊಬ್ಬರಿ ಎಣ್ಣೆ: ಇದು ಕೂದಲು ಮತ್ತು ಚರ್ಮದ ಜೀವಕೋಶಗಳಿಗೆ ಸುಲಭವಾಗಿ ಒಗ್ಗಿಕೊಳ್ಳುವ ಮತ್ತು ಆರೋಗ್ಯಯುತವಾದ ಎಣ್ಣೆ. ಇದನ್ನು ನಿಮ್ಮ ಚರ್ಮಕ್ಕೆ  ಹಚ್ಚಿ ಮಸಾಜ್ ಮಾಡುವುದರಿಂದ  ನಿಮ್ಮ  ಚರ್ಮ ತೇವಾಂಶವನ್ನು ಕಳೆದುಕೊಳ್ಳುವುದಿಲ್ಲ.


ಲೋಳೆರಸ: ಲೋಳೆರಸವು ಚರ್ಮಕ್ಕೆ ತೇವಾಂಶವನ್ನು ನೀಡುವುದರಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅದರಲ್ಲಿ ಸಿಗುವ ಜೆಲ್ ನ್ನು ಮುಖಕ್ಕೆ ಅಥವಾ ಒಣಗಿರುವ ಚರ್ಮದ ಭಾಗಕ್ಕೆ ಲೇಪನ ಮಾಡುವುದು. ಈ ಲೇಪನವು ವಿಟಮಿನ್‌ ಸಿ ಮತ್ತು ಇ ಗಳೊಂದಿಗೆ ಬೀಟಾ-ಕೆರೋಟಿನ್‌ ಅಂಶವನ್ನು ಹೊಂದಿರುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಆಲೂಗಡ್ಡೆ ಶೇಂಗಾ ಪುಡಿಯಿಂದ ಸ್ವಾದಿಷ್ಟವಾದ ಪರೋಟಾ..

ಮೊದಲು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಬೇಕು. ನಂತರ ಅದರ ಸಿಪ್ಪೆಯನ್ನು ತೆಗೆದು ಸ್ಮ್ಯಾಶ್ ಮಾಡಿಕೊಳ್ಳಬೇಕು. ...

news

ಸಿಡಿ ನೋಡಿ ಯುವತಿ ಮಾಡಿದ್ದೇನು ಗೊತ್ತಾ?

ಟಿವಿ ನೋಡೋಕೆ ಅಂತ ಆತನ ಮಗಳು ಬರುತ್ತಿದ್ದಳು. ಒಂದು ದಿನ ಅಶ್ಲೀಲ ಸಿಡಿ ನೋಡಿ ಅದರಲ್ಲಿರುವಂತೆ ಬಾಡಿಗೆದಾರನ ...

news

ಸಬ್ಬಕ್ಕಿ ಕುರುಕುರೆ

ಬಾಯಲ್ಲಿ ಕುರುಂ ಕುರುಂ ಎಂದು ಸದ್ದನ್ನುಂಟು ಮಾಡುವ ತಿಂಡಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲಿಯೂ ...

news

ಸವತೆ ಬೀಜದ ಪಾಯಸ

ನಮ್ಮಲ್ಲಿ ಶುಭ ಸಮಾರಂಭಗಳಲ್ಲಿ ಪಾಯಸವನ್ನು ಮಾಡುವುದು ಅದರಲ್ಲಿಯೂ ಬಗೆಬಗೆಯ ನಾನಾ ವಿಧದ ಪಾಯಸಗಳನ್ನು ಮಾಡಿ ...