ಮುಲ್ತಾನಿ ಮಿಟ್ಟಿಯನ್ನು ಭಾರತದಲ್ಲಿ ಹಲವಾರು ಕಾಲದಿಂದಲೂ ಚರ್ಮದ ಸಮಸ್ಯೆಗಳಿಂದ ಪರಿಹಾರ ಪಡೆಯಲು ಮತ್ತು ಕಾಂತಿಯುತ, ಕಲೆರಹಿತ ತ್ವಚೆಯನ್ನು ಪಡೆಯಲು ಬಳಸಲಾಗುತ್ತದೆ. ಇದು ತಲೆಮಾರುಗಳಿಂದ ಹಸ್ತಾಂತರಿಸಲ್ಪಟ್ಟ ಹಳೆಯ ಔಷಧೀಯ ಮಾರ್ಗಗಳಲ್ಲಿ ಒಂದಾಗಿದೆ. ಮುಲ್ತಾನಿ ಮಿಟ್ಟಿ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಲು ಉತ್ತಮವಾದ ಏಜೆಂಟ್ ಎನ್ನಲಾಗುತ್ತದೆ. ಅದು ಎಣ್ಣೆ, ಕೊಳಕು, ಬೆವರು ಮತ್ತು ಕಲ್ಮಶಗಳನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತದೆ, ಚರ್ಮವನ್ನು ಸ್ವಚ್ಛವಾಗಿ ಮತ್ತು ಮೃದುವಾಗಿರಿಸುತ್ತದೆ. ಅಲ್ಲದೇ,ಚರ್ಮದ ಟೋನ್ ಅನ್ನು ಸಮಗೊಳಿಸುತ್ತದೆ ಮತ್ತು ಮೈಬಣ್ಣವನ್ನು ಹೆಚ್ಚು ಮಾಡುತ್ತದೆ.