ಪುದೀನಾ ಎಲೆ ನೆನೆಸಿದ ನೀರು ಕುಡಿಯುವುದರಿಂದ ಬೇಸಿಗೆಯಲ್ಲಿ ದೇಹಾರೋಗ್ಯವನ್ನು ಕಾಪಾಡಬಹುದು. ಇದರಿಂದ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ...? ಪುದೀನಾ ಸೊಪ್ಪಿನಲ್ಲಿ ಸೌಂದರ್ಯದ ಗುಟ್ಟು ಅಡಗಿದೆ. ಮೊಡವೆ, ಬಿಸಿಲಿನ ಕಲೆ, ನಿಸ್ತೇಜ ತ್ವಚೆ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತ್ವಚೆಯನ್ನು ಶುದ್ದೀಕರಿಸುತ್ತವೆ. ಸೌತೆಕಾಯಿಯಂತೆ ಪುದೀನಾ ಕೂಡಾ ತ್ವಚೆಗೆ ಮಾಯಿಶ್ಚರೈಸ್ ಮಾಡುತ್ತದೆ. ಪುದೀನಾ ರಸದೊಂದಿಗೆ ಜೇನು ಅಥವಾ ಮೊಸರು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಹೆಚ್ಚಿನ ಪರಿಣಾಮ