Widgets Magazine

ನೈಸರ್ಗಿಕವಾದ ಈ ಮನೆಮದ್ದನ್ನು ಬಳಸಿ 10-15 ದಿನಗಳಲ್ಲೇ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಹೋಗಲಾಡಿಸಿ

ಬೆಂಗಳೂರು| pavithra| Last Modified ಭಾನುವಾರ, 20 ಜನವರಿ 2019 (11:24 IST)
ಬೆಂಗಳೂರು : ಕೆಲವರಿಗೆ ಕಣ್ಣಿನ ಸುತ್ತ ಕಪ್ಪು ಕಲೆ ಇರುತ್ತದೆ. ಇದು ಮುಖದ ಅಂದವನ್ನುಕೆಡಿಸುತ್ತದೆ. ಕೆಮಿಕಲ್ ಯುಕ್ತ ಕ್ರೀಂಗಳನ್ನು ಹಚ್ಚಿ ಅದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಬದಲು ಈ ಮನೆಮದ್ದುಗಳನ್ನು ಬಳಸಿ 10-15 ದಿನಗಳಲ್ಲೇ ಅದನ್ನು ಕಡಿಮೆಮಾಡಿಕೊಳ್ಳಿ.


ಪ್ರತಿದಿನ ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಅಥವಾ ಆಲೀವ್ ಆಯಿಲ್ ಅಥವಾ ಹರಳೆಣ್ಣೆಯನ್ನು ರಾತ್ರಿ ವೇಳೆ ಕಣ್ಣೀನ ಸುತ್ತ ಹಚ್ಚಿಕೊಂಡು 5-10ನಿಮಿಷ ಚೆನ್ನಾಗಿ ಮಸಾಜ್ ಮಾಡಿಕೊಂಡು ಬೆಳಿಗ್ಗೆ ತಣ್ಣೀರಿನಿಂದ ತೊಳೆದರೆ 10-15 ದಿನಗಳಲ್ಲೇ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಮಾಯವಾಗುತ್ತದೆ.


ದಿನಕ್ಕೆ 2 ಬಾರಿ
ಆಲೂಗಡ್ಡೆ ಅಥವಾ ಸೌತೆಕಾಯಿಯನ್ನು ರೌಂಡ್ ಆಗಿ ಕಟ್ ಮಾಡಿಕೊಂಡು ಕಣ್ಣಿನ ಮೇಲೆ ಇಟ್ಟುಕೊಂಡು 10-15 ನಿಮಿಷ ಬಿಟ್ಟು ತೊಳೆದರೆ 10-15 ದಿನಗಳಲ್ಲೇ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಕಡಿಮೆಯಾಗುತ್ತದೆ. ರೋಸ್ ವಾಟರ್ ಅನ್ನು ಹತ್ತಿಯಿಂದ ತೆಗೆದುಕೊಂಡು ಪ್ರತಿದಿನ 2 ಬಾರಿ ಕಣ್ಣಿನ ಸುತ್ತ ಹಚ್ಚಿ ಮಸಾಜ್ ಮಾಡಿದರೆ ಆ ಕಪ್ಪು ಕಲೆ ಹೋಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :