ವಿವಿಧ ಬಗೆಯ ಫೇಸ್ ಪ್ಯಾಕ್ ಗಳನ್ನು ಮಾಡಿಕೊಳ್ಳುವಾಗ ರೋಸ್ ವಾಟರ್ ಅನ್ನು ಬಳಸುತ್ತೇವೆ. ಆದರೆ ನಮ್ಮ ಮನೆಯಲ್ಲೇ ಬೆಳೆದ ಗುಲಾಬಿ ಹೂವಿನ ಎಸಳುಗಳು ಮುಖಕ್ಕೆ ಕಾಂತಿ ಹಾಗೂ ಹೊಳಪನ್ನು ತಂದುಕೊಡಬಲ್ಲವು ಎಂಬುದು ನಿಮಗೆ ಗೊತ್ತೇ? ನಿಸ್ತೇಜ ಮುಖಕ್ಕೆ ಕಳೆ ಕಟ್ಟುವ ಗುಲಾಬಿ ಹೂವಿನ ಎಸಳುಗಳು ಮುಖದ ಮೊಡವೆಗಳನ್ನೂ ನಿವಾರಿಸುತ್ತವೆ. ಗುಲಾಬಿಯ ಹತ್ತು ಎಸಳಿಗೆ ಹಸಿ ಹಾಲು ಹಾಗೂ ಜೇನು ಸೇರಿಸಿ ರುಬ್ಬಿ. ದಪ್ಪನೆಯ ಪೇಸ್ಟ್ ಅನ್ನು ಕುತ್ತಿಗೆ, ಮುಖಕ್ಕೆ ಲೇಪಿಸಿ.