ಸುಂದರವಾದ ಚರ್ಮ ಪಡೆಯುವುದು ಎಲ್ಲರ ಕನಸು. ಕೆಲವು ನೈಸರ್ಗಿಕವಾದ ತೈಲದಿಂದ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ನಮ್ಮ ಪೂರ್ವಿಕರು ಕೂಡ ಹಿಂದೆ ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಸಾರಭೂತ ತೈಲಗಳನ್ನು ತಮ್ಮ ದೇಹಕ್ಕೆ ಹಾಗು ತ್ವಚೆಗೆ ಲೇಪಿಸಿಕೊಳ್ಳುತ್ತಿದ್ದರು. ಆಯುರ್ವೇದದಲ್ಲಿ ತೈಲಗಳಿಗೆ ತನ್ನದೇ ಆದ ಪ್ರಾಧ್ಯನ್ಯತೆ ಇರುವುದು ನಮಗೆಲ್ಲರಿಗೂ ತಿಳಿದೇ ಇದೆ. ಮೊಡವೆಗಳಿಂದ ಹಿಡಿದು ಸುಕ್ಕುಗಟ್ಟಿದ ಚರ್ಮಕ್ಕೂ ಕೂಡ ಎಣ್ಣೆಗಳು ಹೆಚ್ಚು ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ. ಮುಖ್ಯವಾಗಿ ತೈಲಗಳು ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ.