ಕಾಂತಿಯುತ ತ್ವಚೆಯ ರಹತ್ಯ!

ಬೆಂಗಳೂರು| Ramya kosira| Last Modified ಮಂಗಳವಾರ, 2 ನವೆಂಬರ್ 2021 (16:13 IST)

ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಫೇಸ್ ಪ್ಯಾಕ್ ಗಳು ದೊರೆಯುತ್ತವೆ. ಆ ಉತ್ಪನ್ನಗಳು ರಾಸಾಯನಿಕಗಳಿಂದ ಮುಕ್ತವಾಗಿರುತ್ತವೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.
ಅದರ ಬದಲಾಗಿ ನೈಸರ್ಗಿಕ ಹಣ್ಣಿನಿಂದ ತಯಾರಿಸಿದ ಅದ್ಭುತವಾದ ಫೇಸ್ ಪ್ಯಾಕ್ಗಳು ನಿಸ್ಸಂದೇಹವಾಗಿ ಬಳಸಬಹುದಾಗಿದೆ. ಇದರಿಂದಾಗಿ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ, ಬದಲಾಗಿ ನಯವಾದ ಹಾಗು ಮೃದುವಾದ ಸೌಂದರ್ಯವನ್ನು ಪಡೆಯಬಹುದು. ಪಪ್ಪಾಯಿಯು ಎಲ್ಲಾ ಋತುಮಾನದಲ್ಲಿಯು ದೊರೆಯುವ ಹಣ್ಣಾಗಿದ್ದು, ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಇದಲ್ಲಿ ಮುಖ್ಯವಾಗಿ ವಿಟಮಿನ್ ಎ ಯಥೇಚ್ಛವಾಗಿದೆ. ನಿಯಮಿತವಾಗಿ ಸೇವಿಸುವುದರಿಂದ ದೃಷ್ಟಿ ದೋಷವು ನಿವಾರಣೆಯಾಗುವುದಲ್ಲದೇ, ಚರ್ಮ ಹಾಗು ಕೂದಲ ಸೌಂದರ್ಯವನ್ನು ಕಾಪಾಡುತ್ತದೆ.
ಪಪ್ಪಾಯಿಯಲ್ಲಿರುವ ಹೆಚ್ಚಿನ ವಿಟಮಿನ್ ಎ, ಸಿ ಮತ್ತು ಆಂಟಿಆಕ್ಸಿಡೆಂಟ್ ಲೈಕೋಪೀನ್ ನಿಮ್ಮ ಚರ್ಮವನ್ನು ಕಾಂತಿಯುತವಾಗಿಸಿ, ಯೌವನದಿಂದ ಕಾಣುವಂತೆ ಮಾಡುತ್ತದೆ.
ಹಾಗಾದರೆ ಪಪ್ಪಾಯಿಯ ಫೇಸ್ ಪ್ಯಾಕ್ ನ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ಪಪ್ಪಾಯಿ ಫೇಸ್ ಪ್ಯಾಕ್
ಪಪ್ಪಾಯಿ ಕೇವಲ ರುಚಿಕರವಾದ ಹಣ್ಣಲ್ಲ, ಬದಲಾಗಿ ನಿಮ್ಮ ಚರ್ಮಕ್ಕೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ.
ಮುಖ್ಯವಾಗಿ ಪಪ್ಪಾಯಿಯಲ್ಲಿರುವ ಕಿಣ್ವಗಳು ಚರ್ಮವನ್ನು ತೇವಗೊಳಿಸುತ್ತದೆ. ಈ ಸಿಹಿಯಾದ ಹಣ್ಣನ್ನು ಸೇವಿಸುವುದರಿಂದ ಚರ್ಮವನ್ನು ಒಳಗಿನಿಂದ ಹೈಡ್ರೇಟ್ ಮಾಡುತ್ತದೆ. ಸತ್ತಚರ್ಮ ಕೋಶವನ್ನು ನಿಧಾನವಾಗಿ ಗುಣಪಡಿಸುತ್ತದೆ. ಕಣ್ಣಿನ ಕೆಳಗೆ ಇರುವ ಕಪ್ಪು ವಲಯವನ್ನು ಮತ್ತು ಮೊಡವೆಗಳನ್ನು ದೂರವಾಗಿಸುತ್ತದೆ. ಉರಿಯೂತವನ್ನು ಶಮನ ಮಾಡುವುದಲ್ಲದೇ, ಅನೇಕ ಚರ್ಮ ತೊಂದರೆಗಳನ್ನು ಬಾರದಂತೆ ರಕ್ಷಿಸುತ್ತದೆ.

ಇದರಲ್ಲಿ ಇನ್ನಷ್ಟು ಓದಿ :