ಬೆಂಗಳೂರು: ಪುರುಷರು ಗಡ್ಡ ಬೆಳೆಸುವುದು ಇತ್ತೀಚೆಗಿನ ಟ್ರೆಂಡ್. ಆದರೆ ದಾಡಿಯಲ್ಲಿ ತುರಿಕೆ ಅಸಹನೀಯವೆನಿಸುತ್ತಿದೆಯೇ? ಹಾಗಿದ್ದರೆ ಏನು ಮಾಡಬೇಕು ಗೊತ್ತಾ? ಆಗಾಗ ಶುದ್ಧ ನೀರಿನಿಂದ ಗಡ್ಡ ತೊಳೆಯುತ್ತಿರಿ. ದಾಡಿಯಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಿ. ದಾಡಿಗೆ ರಾಸಾಯನಿಕ ಯುಕ್ತ ಕಂಡೀಷನರ್, ಶ್ಯಾಂಪೂ, ಬಣ್ಣಗಳ ಬಳಕೆ ಮಾಡಬೇಡಿ. ಆಗಾಗ ದಾಡಿಯನ್ನು ಟ್ರಿಮ್ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.