ಮೊಸರು ಸೌಂದರ್ಯ ವರ್ಧಕವಾಗಿ ಬಳಸುವುದು ಪ್ರಾಚೀನವಾದ ಪದ್ಧತಿ. ತಮ್ಮ ಚೆಲುವನ್ನು ಹೆಚ್ಚಿಕೊಳ್ಳುವ ಸಲುವಾಗಿ ಮೊಸರನ್ನು ಮಾಯಿಶ್ಚರೈಸರ್ ಅಥವಾ ಕ್ಲೆನ್ಸರ್ ಆಗಿ ಬಳಸುತ್ತಿದ್ದರು. ಇದೊಂದು ಅತ್ಯುತ್ತಮವಾದ ಪೋಷಕಾಂಶಗಳನ್ನು ಹೊಂದಿರುವ ಆಹಾರವಾಗಿದ್ದು, ಕರುಳಿನ ಆರೋಗ್ಯ ಹಾಗು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿನ ಲ್ಯಾಕ್ಟಿಕ್ ಆಮ್ಲ, ಕ್ಯಾಲ್ಸಿಯಂ, ವಿಟಮಿನ್ ಬಿ ಇರುವ ಕಾರಣದಿಂದ ಸೌಂದರ್ಯ ಉತ್ಪನ್ನವಾಗಿ ಬಳಸಲಾಗುತ್ತದೆ. ಮೊಸರಿನಲ್ಲಿರುವ ಅಗಾಧ ಪ್ರಮಾಣದ ಪೋಷಕಾಂಶವು ಚರ್ಮವನ್ನು ಬಿಳಿಯಾಗಿಸಿ, ಹೊಳೆಯುಂತೆ ಮಾಡುತ್ತದೆ. ನಿಮ್ಮ ಫೇಸ್ ಪ್ಯಾಕ್ ಗಳಿಗೆ ಮೊಸರನ್ನು