ಜೀವ ಬಲಿ ತೆಗೆದುಕೊಂಡ ಕುರುಡು ನಂಬಿಕೆ

WDWD
ನಂಬಿಕೆ ಅಪನಂಬಿಕೆಗಳೇ ಮನುಷ್ಯನ ಜೀವಾಳ. ಎಂಥಾ ವಿಚಿತ್ರ ನೋಡಿ, ನಂಬುವುದಕ್ಕೂ ಒಂದು ಮಿತಿ ಬೇಡವೆ?

ನಂಬಿಕೆ, ಅಪನಂಬಿಕೆಗಳ ಕಥಾ ಪಯಣದಲ್ಲಿ ಈಗಾಗಲೇ ನಾವು ಸಾಕಷ್ಟು ದೂರ ಸಾಗಿದ್ದೇವೆ. ನಮ್ಮೊಂದಿಗಿನ ಸಮಾಜದ ಮೂಢ ನಂಬಿಕೆಗಳನ್ನು ತೆರೆದಿಟ್ಟು ನಿರ್ಣಯ ನಿಮ್ಮದು ಎಂದು ಹೇಳಿದ್ದೇವೆ. ಮಾಧ್ಯಮ ಎಂದೂ ನಿರ್ಣಯ ನೀಡಬಾರದು, ನೀಡದು. ನಮ್ಮದು ಅಂತ ಏನಿದ್ದರೂ ಸವಾಲು, ಅದೊಂದನ್ನು ಚಾಚೂ ತಪ್ಪದೇ ಮಾಡುತ್ತಾ ಬಂದಿದ್ದೇವೆ.

ಓದುಗರೆ, ಕೂದಲೆಳೆಯ ಅಂತರ ಸತ್ಯ ಮತ್ತು ಅಸತ್ಯಗಳ ನಡುವೆ ಇದೆ. ಅದು ಯಾವುದು ಅಂತ ತಿಳಿದ್ಕೊಳ್ಳೋದು ನಿಮಗೆ ಬಿಟ್ಟದ್ದು.

ಪೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಲ್ಲಿದೆ ನೋಡಿ. ನಂಬಿ ಬಂದವರಲ್ಲಿ ಅನಾಮತ್ತು 11 ಜನರನ್ನು ಸಾವಿನ ದವಡೆಗೆ ನೂಕಿ ನಿರುಮ್ಮಳವಾಗಿ ಕುಳಿತ ಸರೌತಾ ಬಾಬಾನ ಕಥೆ. (ಸರೌತಾ ಅಂದರೆ ಕಾಯಿ ಕತ್ತರಿಸಲು ಉಪಯೋಗಿಸುವ ಒಂದು ಸಾಧನ) ಮಧ್ಯಪ್ರದೇಶದ ಜಬಲ್ಪುರ್ ಸಮೀಪದಲ್ಲಿದ್ದ ಈತ ಜನರಿಗೆ ಹೇಳಿದ್ದು ಏನು ಗೊತ್ತೇ ?

WDWD
ಸರೌತಾದಿಂದ ನಿಮ್ಮ ಕಣ್ಣುಗಳ ರೋಗ ಕಡಿಮೆ ಮಾಡುತ್ತೇನೆ, ಏಡ್ಸ್, ಕ್ಯಾನ್ಸರ್‌ನಂತಹಾ ರೋಗಗಳನ್ನೂ ಇನ್ನಿಲ್ಲದಂತೆ ಮಾಡುತ್ತೇನೆ ಎಂದು. ಜನಾ ಎಂತವರು ನೋಡಿ, ಅಂವ ಹೇಳಿದ ಇವರು ಕೇಳಿದರು. ಸರೌತಾ ಬಾಬಾನ ಅಸಲಿ ಹೆಸರು ಈಶ್ವರ್ ಸಿಂಗ್ ರಜಪೂತ್. ಇವನ ವಿಚಿತ್ರ ಚಿಕಿತ್ಸಾ ಪದ್ಧತಿ ಆತನನ್ನು ಸರೌತಾವಾಲೇ ಬಾಬಾ, ಸರ್ಜನ್ ಬಾಬಾ ಎಂದು ಮಾಡಿಬಿಟ್ಟಿತು.

ಈ ಬಾಬಾನ ಚಿಕಿತ್ಸೆ ವಿಚಿತ್ರ. ಬಂದ ರೋಗಿಯನ್ನು ಅಡ್ಡ ಮಲಗಿಸಿ ಮುಖದ ಮೇಲೊಂದು ಬಟ್ಟೆಹಾಕಿ ಬಟ್ಟೆಯೊಳಗಿನಿಂದ ಸರೌತಾವನ್ನು ರೋಗಿಯ ಕಣ್ಣಿನಲ್ಲಿ ಇರಿಸುತ್ತಿದ್ದ. ಇವನ ದಾವಾ ಕೂಡ ಹಾಗೆ ಇತ್ತು. ಈ ಮೊದಲು ಡಾಕ್ಟರ್‌ಗಳ ಹತ್ತಿರ ಚಿಕಿತ್ಸೆ ಪಡೆದಿದ್ದರೆ, ರೋಗ ಗುಣವಾಗುವುದು ಗ್ಯಾರಂಟಿ ಇಲ್ಲ. ನೇರವಾಗಿ ನನ್ನ ಬಳಿ ಬಂದಿದ್ದರೆ ರೋಗ ಗುಣವಾಗುವುದು ಪಕ್ಕಾ ಎಂದೇ ಹೇಳುತ್ತಿದ್ದ.

ಈಗಾತ ತನ್ನ ಸರೌತಾದಿಂದಲೇ ಕತ್ತರಿಸಲಾದ ಕೆಲವೊಂದು ಮರದ ತುಂಡುಗಳನ್ನು ಅವರಿಗೆಲ್ಲಾ ವಿತರಿಸುತ್ತಾನೆ. ಎಲ್ಲಾ ಬಗೆಯ ರೋಗಗಳನ್ನು ಈ ಮರದ ತುಂಡುಗಳು ಜನರಿಂದ ದೂರವಿಡುತ್ತದೆ ಎನ್ನುತ್ತಾನೆ ಆತ.

ಸರಕಾರಗಳು ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಿಕೊಟ್ಟಲ್ಲಿ ಜನರು ಈ ರೀತಿ ಕುರುಡು ನಂಬಿಕೆಗೆ ವಾಲುವುದನ್ನು ತಡೆಯಬಹುದೇ? ಈ ಕುರಿತು ನಿಮಗೇನನ್ನಿಸುತ್ತದೆ? ಇಲ್ಲಿ ಚರ್ಚಿಸಿ.ಇದರಲ್ಲಿ ಇನ್ನಷ್ಟು ಓದಿ :  

ನೀವು ನಂಬುವಿರಾ

ಅಶ್ವತ್ಥಾಮ ಇನ್ನೂ ಬದುಕಿದ್ದಾನೆಯೇ?

ಅಸೀರಗಢದ ಕೋಟೆ... ಇದು ನಿಗೂಢತೆಗಳ ಮತ್ತು ರಹಸ್ಯಗಳನ್ನು ಒಡಲಲ್ಲಿ ಇರಿಸಿಕೊಂಡ ಕೋಟೆ. ಇದರಲ್ಲಿರುವ ...

ವರ ಪ್ರಾಪ್ತಿಗೆ ಶವ ಸಾಧನೆ...!

ಕೆಲವರಿಗೆ ಕಾರಿರುಳ ರಾತ್ರಿಯ ಪಯಣಗಳು ರೋಚಕ ಅನುಭವ ನೀಡುತ್ತವೆ. ಇನ್ನು ಕೆಲವರಿಗೆ ಸಾಧನೆಯಲ್ಲಿ ಸಾಗಿ ತಮ್ಮ ...

ಕಾಲಸರ್ಪ ಯೋಗ ಮತ್ತು ಪರಿಹಾರ

ಜನ್ಮಕುಂಡಲಿಯಲ್ಲಿನ ಗ್ರಹಗತಿಗಳು ವ್ಯಕ್ತಿಯ ಶ್ರೇಯಸ್ಸಿಗೆ ಧಕ್ಕೆ ತರಲು ಸಾಧ್ಯವೇ ? ವ್ಯಕ್ತಿಯನ್ನು ...

ಬಾಯಿಯಿಂದ ಕಿಡ್ನಿ ಕಲ್ಲು ತೆಗೆಯುವ ಅಜ್ಜಿ!

ರಹಸ್ಯ, ರೋಚಕತೆಯ ಅದ್ಭುತ ಪಯಣ ನಮ್ಮನ್ನು ಸುತ್ತಾಡಿಸುತ್ತಾ ಕೊನೆಗೆ ಮಧ್ಯಪ್ರದೇಶದ ಉಜ್ಜಯಿನಿ ಬಳಿ ಇರುವ ...